ಪ್ರಾಣಿ ಪ್ರಿಯರಿಗೆ ಪ್ರಾಣಿಗಳಿಗೆ ಹೆಸರು ಸೂಚಿಸುವುದು ಎಂದರೆ ಇನ್ನಿಲ್ಲದ ಪ್ರೀತಿ. ಈಗ ಅಂಥದ್ದೊಂದು ಅವಕಾಶ ಇದೀಗ ಪ್ರಾಣಿ ಪ್ರಿಯರಿಗೆ ಸಿಕ್ಕಿದೆ. ಪ್ರಾಣಿ ಪ್ರಿಯರು ಮಾತ್ರವಲ್ಲ ಆಸಕ್ತಿ ಇರುವವರೆಲ್ಲಾ ಚಿರತೆಗೆ ಹೆಸರು ಸೂಚಿಸಬಹುದು. ಅದು ಅಂತಿಂಥ ಚಿರತೆಯಲ್ಲ 70 ವರ್ಷಗಳ ಬಳಿಕ ಆಫ್ರಿಕಾದಿಂದ ಭಾರತಕ್ಕೆ ಬಂದ ಚಿರತೆಗಳಿಗೆ.
ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದಂದು ಭಾರತಕ್ಕೆ ಕೊಡುಗೆಯಾಗಿ ನಮೀಬಿಯಾದಿಂದ ಚಿರತೆಗಳನ್ನು ತರಿಸಲಾಗಿತ್ತು. ಎಂಟು ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದೆ. ಆದರೆ ಇದೀಗ ಆ ಚಿರತೆಗಳಿಗೆ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ. ಈ ಅವಕಾಶವನ್ನು ಜನರಿಗೆ ಬಿಡಲಾಗಿದೆ.
ಈ ಸಂಬಂಧ ಇತ್ತಿಚೆಗೆ ಪ್ರಧಾನಿ ಮೋದಿ, ಮನ್ ಕೀ ಬಾತ್ ನಲ್ಲಿ ಮಾಹಿತಿ ನೀಡಿದ್ದರು. ಚಿರತೆಗಳಿಗೆ ಹೆಸರನ್ನು ನೀವೂ ಸೂಚಿಸಿ ಎಂದಿದ್ದರು. ಈ ಹೆಸರನ್ನು ಸೂಚಿಸಬೇಕು ಎಂದರೆ Mygov ಆಪ್ ಗೆ ಹೋಗಿ ಸೂಚಿಸಬೇಕು. ಈಗಾಗಲೇ ಮಿಲ್ಖಾ, ಚೇತಕ್, ವಾಯು ಹೀಗೆ ಅನೇಕ ಹೆಸರುಗಳನ್ನು ಸೂಚಿಸಲಾಗಿದೆ. ಸುಮಾರು 750ಕ್ಕೂ ಹೆಚ್ಚು ಹೆಸರುಗಳು ಬಂದಿವೆ. ಇನ್ನು ಕಾಲಾವಕಾಶವಿದೆ. ನೀವೂ ಹೆಸರು ಸೂಚಿಸಬಹುದು. ಫೈನಲ್ ನೀವೂ ಸೂಚಿಸಿದ ಹೆಸರೇ ಆಗಬಹುದು.