ಬೇಲ್ ಮೇಲೆ ಹೊರಗಿರುವ ಸಂತೋಷ್ ತನಿಖೆಗೇಕೆ ಸಹಕರಿಸುತ್ತಿಲ್ಲ..? : ಕಾಂಗ್ರೆಸ್ ಪ್ರಶ್ನೆ

 

 

ಬೆಂಗಳೂರು: ತೆಲಂಗಾಣದ ಟಿಎಸ್ ಆರ್ ಪಕ್ಷದ ಶಾಸಕರನ್ನು ಬಿಜೆಪಿ ತನ್ನೆಡೆಗೆ ಸೆಳೆಯಲು ನೋಡುತ್ತಿದೆ. ಆಪರೇಷನ್ ಕಮಲ ನಡೆಸುತ್ತಿದೆ ಎಂದು ಬಿ ಎಲ್ ಸಂತೋಷ್ ಮೇಲೆ ಆರೋಪವಿತ್ತು. ಅದರ ತನಿಖೆಗೆ ಕೋರ್ಟ್ ಕೂಡ ಅನುಮತಿ ನೀಡಿತ್ತು. ಈ ಬಗ್ಗೆ ನೋಟಿಸ್ ನೀಡಿದ್ದರು ಬಿಎಲ್ ಸಂತೋಷ್ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದೀಗ ಈ ವಿಚಾರವಾಗಿ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕಾಂಗ್ರೆಸ್ ತನ್ನ ಟ್ವಿಟ್ಟರ್ ನಲ್ಲಿ, ಬೇಲ್ ಮೇಲೆ ಹೊರಗಿರುವ @blsanthosh ಎಂಬ ವ್ಯಕ್ತಿ ಅಪರೇಷನ್ ಕಮಲದ ಪ್ರಕರಣದ ತನಿಖೆಗೆ ಸಹಕರಿಸುತ್ತಿಲ್ಲ ಏಕೆ @BJP4Karnataka ?. ಕಾನೂನನ್ನು ಗೌರವಿಸುವುದು “ಶಾಸಕರ ಕಳ್ಳರಿಗೆ” ತಿಳಿದೇ ಇಲ್ಲವೇ?. ತೆಲಂಗಾಣದಲ್ಲಿ ವಶಪಡಿಸಿಕೊಂಡ 150 ಕೋಟಿ ಹಣದ ಮೂಲ ಯಾವುದು? ಇಷ್ಟು ದೊಡ್ಡ ಮೊತ್ತ ಸಿಕ್ಕಿದರೂ ಐಟಿ, ಇಡಿಗಳು ಕಾರ್ಯೋನ್ಮುಖರಗದಿರುವುದೇಕೆ? ಎಂದು ಪ್ರಶ್ನಿಸಿದೆ.

Leave a Reply

Your email address will not be published. Required fields are marked *

error: Content is protected !!