ಬೇಸಿಗೆ ಬಂದರೆ ಸಾಕು ಪ್ರತಿ ಸಲ ಬಿಸಿಲಿನ ತಾಪಮಾನ ಏರಿಕೆಯಾಗುತ್ತಲೇ ಹೋಗುತ್ತಿದೆ. ಇದರಿಂದ ಜನ ನೊಂದು ಹೋಗಿದ್ದಾರೆ. ಈ ಬೇಸಿಗೆ ಬೇಗ ಕಳೆದು, ಮಳೆಗಾಲವಾದರೂ ಬರಬಾರದ ಎಂಬ ಬೇಸರದಲ್ಲಿದ್ದಾರೆ. ಧಗೆ ಹೆಚ್ಚಾಗುತ್ತಾ ಹೋಗುತ್ತಿದೆ. ಬಿಸಿಲಿನಿಂದಾಗಿ ತಾಪಮಾನ ಹೆಚ್ಚಾಗಿದ್ದು, ಗರಿಷ್ಠ 35 ಡಿಗ್ರಿ ಉಷ್ಣಾಂಶ ದಾಖಲಾಗಿದೆ.
ತಾಪಮಾನದ ಹೆಚ್ಚಳದ ಬಗ್ಗೆ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಒಣಹವೆ ಏರಿಕೆಯಾಗುತ್ತಿದ್ದು, ರಾಜ್ಯದ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚಿಸಿದೆ. ಅದರಲ್ಲಿ ಬೆಂಗಳೂರು 36-20, ಮಂಗಳೂರು -34-27, ಶಿವಮೊಗ್ಗ :40-22, ಬೆಳಗಾವಿ : 38-22, ಮೈಸೂರು :38-22, ಮಂಡ್ಯ :38-22 ತಾಪಮಾನ ವರದಿಯಾಗಿದೆ.