ಮಾಜಿ ಸಿಎಂ ಯಡಿಯೂರಪ್ಪ ಅವರು ನಿನ್ನೆ ವಿಧಾನಸಭೆಯಲ್ಲಿ ವಿದಾಯದ ಭಾಷಣ ಮಾಡಿದ್ದರು. ಈ ವೇಳೆ ಬಿಜೆಪಿ ಪಕ್ಷ ಗೆಲುವಿಗಾಗಿವಮುಂದೆಯೂ ಶ್ರಮಿಸಬೇಕೆಂದು ಹೇಳಿದರು. ಯಡಿಯೂರಪ್ಪ ಅವರ ವಿದಾಯದ ಭಾಷಣ ಎಂಥವರಿಗೂ ಹೆಮ್ಮೆ ಪಡುವಂತೆ ಮಾಡಿತ್ತು, ಬಿಜೆಪಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುವಂತೆ ಕೇಳಿಸಿತ್ತು. ಈ ವಿದಾಯದ ಭಾಷಣಕ್ಕೆ ಇದೀಗ ಪ್ರಧಾನಿ ಮೋದಿ ಅವರು ಮನಸೋತಿದ್ದಾರೆ.
ತಮ್ಮ ಟ್ವಿಟ್ಟರ್ ನಲ್ಲಿ ಕನ್ನಡದಲ್ಲಿಯೇ ಬರೆದುಕೊಂಡಿದ್ದಾರೆ. “ಬಿಜೆಪಿಯ ಒಬ್ಬ ಕಾರ್ಯಜರ್ತನಾದ ನನಗೆ ಈ ಭಟಷಣ ಅತ್ಯಂತ ಸ್ಪೂರ್ತಿದಾಯಕ ಎಂದೆನಿಸಿದೆ. ಇದರಲ್ಲಿ ನಮ್ಮ ಪಕ್ಷದ ನೈತಿಜತೆಯೂ ಅಡಕವಾಗಿದೆ. ಇದು ಖಂಡಿತವಾಗಿಯೂ ಇತರ ಕಾರ್ಯಜರ್ತರಿಗೂ ಸ್ಪೂರ್ತಿ ನೀಡುತ್ತದೆ” ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ವಿದಾಯದ ಭಾಷಣ ಮಾಡುವಾಗ ಯಡಿಯೂರಪ್ಪ ಅವರು, ಪಕ್ಷಕ್ಕಾಗಿ ನಾನು ಇನ್ನೂ ಹೋರಾಟ ಮಾಡುತ್ತೇನೆ. ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ನೀವೂ ಎಲ್ಲೆಲ್ಲಿ ಕರೆಯುತ್ತಿರೋ ಅಲ್ಲೆಲ್ಲಾ ಬರುತ್ತೇನೆ. ಇನ್ನು ಐದು ವರ್ಷಗಳ ಕಾಲ ದೇವರು ಕೆಲಸ ಮಾಡುವ ಶಕ್ರಿ ನೀಡಲಿ. ನಾನು ಈಗಾಗಲೇ ಹೇಳಿದ್ದೇನೆ ಚುನಾವಾಣೆಯಲ್ಲಿ ನಿಲ್ಲಲ್ಲ ಎಂದು. ಬದುಕಿನ ಕೊನೆಯ ಉಸಿರು ಇರುವ ತನಕ ಬಿಜೆಪಿಯನ್ನು ಕಟ್ಟುವುದಕ್ಕಾಗಿ, ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕಾಗಿ ನನ್ನ ಶಕ್ತಿ ಮೀರಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ