ಬಳ್ಳಾರಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲೆಡೆ ಸಾಕಷ್ಟು ಸಮಸ್ಯೆ ತಲೆದೂರಿದೆ. ಜನರು ಜೀವನ ನಡೆಸುವುದಕ್ಕೂ ಕಷ್ಟವಾಗಿದೆ. ಎಷ್ಟೋ ಹಳ್ಳಿಗಳು ನೀರಿನಿಂದ ಮುಳುಗಡೆಯಾಗಿದೆ. ಇನ್ನು ಉತ್ತರ ಕರ್ನಾಟಕ, ಮಲೆನಾಡು ಕಡೆಗಳೆಲ್ಲಾ ಮಳೆ ಹೆಚ್ಚಾಗಿದೆ. ಇನ್ನು ಕೆಲವು ದಿನಗಳ ಕಾಲ ಇದೆ ರೀತಿ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.
ಈ ಮಧ್ಯೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಮುದೇಗುಪ್ಪದಲ್ಲಿ ಪ್ರವಾಹ ಬಂದಿದೆ. ಈ ಪ್ರವಾಹದಲ್ಲಿ ನೆರೆಯಲ್ಲಿ ಅರ್ಚಕರ ಕುಟುಂಬ ಹಾಗೂ ಸಿಬ್ಬಂದಿಗಳು ಸಿಲುಕಿಕೊಂಡಿದ್ದರು. ಶನೇಶ್ಚರ ದೇವಸ್ಥಾನದ ಪಕ್ಕದಲ್ಲಿಯೇ ಅರ್ಚಕರ ಕುಟುಂಬವಿತ್ತು. ನೆರೆಪ್ರವಾಹ ಉಂಟಾದ ಕಾರಣ ಅರ್ಚಕರನ್ನು ಕರೆತರಲು ಬೋಟ್ ನಲ್ಲಿ ತೆರಳಿದ್ದಾಗ ಬೋಟ್ ಮಗುಚಿಕೊಂಡಿತ್ತು. ಅಗ್ನಿಶಾಮಕ ದಳ ಸೇರಿದಂತೆ 10 ಜನ ಮತ್ತೆ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಇದೀಗ ಮತ್ತೊಂದು ಬೋಟ್ ಕಳುಹಿಸಿ ಅವರನ್ನು ರಕ್ಷಿಸಲಾಗಿದೆ.
ಇನ್ನು ಇದೇ ಜಿಲ್ಲೆಯಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿದೆ. ದೋಣಿಗಳ ಮೂಲಕ ಓಡಾಡುವ ಸ್ಥಿತಿ ಎದುರಾಗಿದೆ. ಬಸರಕೋಡು ಗ್ರಾಮಕ್ಕೆ ನದಿ ನೀರು ನುಗ್ಗಿದೆ. ಎಲ್ಲರೂ ತೆಪ್ಪದ ಮೂಲಕ ಸಾಗಿಸುತ್ತಿದ್ದಾರೆ. ಅಲ್ಲಿನ ಜನರಿಗೆ ಊಟದ ವ್ಯವಸತೆಯನ್ನು ಮಾಡಲಾಗುತ್ತಿದೆ. ಇದೊಂದೆ ಅಲ್ಲ ವೇದಾವತಿ ನದಿಯ ಪ್ರವಾಹ ಸುಮಾರು 250ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ನುಗ್ಗಿದೆ. ಇದರಿಂದ ಜನರು ತತ್ತರಿಸಿ ಹೋಗಿದ್ದಾರೆ.