ಬರಗಾಲದ ನಿಯಮ ಸಡಿಲಿಕೆಗೆ ಕೇಂದ್ರಕ್ಕೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಆಗಸ್ಟ್ ತಿಂಗಳಿನ ಅರ್ಧ ಭಾಗ ಮುಗಿಸಿದರೂ ಮಳೆಯಾಗುವ ಸೂಚನೆ ಕಾಣುತ್ತಿಲ್ಲ. ಜೂನ್, ಜುಲೈನಲ್ಲಿಯೇ ಸಾಕಷ್ಟು ಮಳೆಯಾಗಬೇಕಿತ್ತು. ಹೊಲಗಳಲ್ಲಿ ಉಳುಮೆ ಮಾಡಿ, ಮೋಡದತ್ತ ಕಣ್ಣಿಟ್ಟು ಕೂತಿದ್ದಾರೆ ರೈತರು. ಬೀಜ ಬಿತ್ತನೆ ಮಾಡಿದರೂ ಮಳೆಯಿಲ್ಲದೆ ಮಣ್ಣಿನಲ್ಲಿ ಊತು ಹೋಗುತ್ತಿವೆ. ಹೀಗಾಗಿ ಈ ಬಾರಿ ಬರಗಾಲ ಎಂದು ಘೋಷಿಸಲು ಸರ್ಕಾರ ನಿರ್ಧಾರ ಮಾಡಿದೆ.
ಆದರೆ ಇದರ ನಡುವೆ ಬರಗಾಲ ಎಂದು ಘೋಷಣೆ ಮಾಡುವುದಕ್ಕೆ ಕೇಂದ್ರ ಸರ್ಕಾರದ ಹಲವು ನಿಯಮಗಳು ಅಡ್ಡಿಯಾಗುತ್ತಿವೆ. ಹೀಗಾಗಿ ನಿಯಮಾವಳಿ ಸಡಿಲಿಕೆಗೆ ಕೇಂದ್ರಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದಾರೆ ಸಿದ್ದರಾಮಯ್ಯ.
ಸದ್ಯಕ್ಕೆ ಬರಗಾಲ ಎಂದು ಘೋಷಣೆ ಮಾಡಲು, ಕನಿಷ್ಠ ಮೂರು ವಾರಗಳ ಕೊರತೆಯಿಂದ ಆ ತಾಲೂಕಿನಲ್ಲಿ ಮಳೆಯಾಗಬಾರದು.60% ಮಳೆ ಕೊರತೆ ಇರಬೇಕು, 33% ಬೆಳೆ ಹಾನಿಯಾದರೆ ಮಾತ್ರ ಪರಿಹಾರ ನೀಡಲು ಅವಕಾಶ.ಈ ನಿಯಮಗಳನ್ನು ತಿದ್ದು ಪಡಿ ಮಾಡಲು ಮನವಿ ಮಾಡಲಾಗಿದೆ. ಮಳೆ ಕೊರತೆ ಪ್ರಮಾಣವನ್ನು ಶೇ. 60 ರಿಂದ 30ಕ್ಕೆ ಇಳಿಸಲು ಮನವಿ ಮಾಡಲಾಗಿದೆ. ಕೇಂದ್ರದ ನಿಯಮಗಳು ಸಡಿಲಿಕೆಯಾದರೆ ಮಾತ್ರ ರಾಜ್ಯದಲ್ಲಿ ಬರಪೀಡಿತ ಎಂದು ಘೋಷಿಸಲು ಸಾಧ್ಯವಾಗುತ್ತದೆ. ಬರಗಾಲ ಎಂದು ಘೋಷಿಸಲು ಕೇಂದ್ರದ ಕೆಲ ನಿಯಮಗಳಯ ಅಡ್ಡಿಯಾಗಿದ್ದು ಅವುಗಳನ್ನು ಸಡಿಲಿಕೆ ಮಾಡಬೇಕೆಂದು ಕೇಂದ್ರದ ಕೃಷಿ ಇಲಾಖೆಗೆ ಪತ್ರ ಬರೆಯಲಾಗಿದೆ. ಕೇಂದ್ರ ಕೃಷಿ ಇಲಾಖೆ ಅನುಮತಿಸಿದರೆ ಮಾತ್ರ ಬರಗಾಲ ಎಂದು ಘೋಷಣೆ ಮಾಡಬಹುದಾಗಿದೆ.