ಬೆಂಗಳೂರು: 2023-24ರ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಇದಾಗಿದ್ದರಿಂದ ಜನರಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಆದ್ರೆ ಕೆಲವೊಂದು ಕ್ಷೇತ್ರಕ್ಕೆ ಬೊಮ್ಮಾಯಿ ಅವರ ಬಜೆಟ್ ನಿರಾಸೆ ಮೂಡಿಸಿದೆ. ಈ ಬಜೆಟ್ ಅನ್ನು ಈಗಾಗಲೇ ವಿರೋಧ ಪಕ್ಷದ ನಾಯಕರು ಕಿವಿ ಮೇಲೆ ಹೂವು ಇಟ್ಟುಕೊಂಡು ವ್ಯಂಗ್ಯವಾಡಿದೆ.
ವಿರೋಧ ಪಕ್ಷದವರಿಗೆ ಗುರಿಯಾಗುವುದೇ ಬೇರೆ. ಆದ್ರೆ ಬೊಮ್ಮಾಯಿ ಬಜೆಟ್ ನಿಂದ ಯಡಿಯೂರಪ್ಪ ಅವರಿಗೆ ಬೇಸರವಾಗಿದೆ ಎನ್ನಲಾಗುತ್ತಿದೆ. ಯಾಕಂದ್ರೆ ಬಜೆಟ್ ಘೋಷಣೆಗೂ ಮುನ್ನ ಯಡಿಯೂರಪ್ಪ ಅವರು ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಬಗ್ಗೆ ಭರವಸೆ ನೀಡಿದ್ದರು. ಆದ್ರೆ ಸಿಎಂ ಬೊಮ್ಮಾಯಿ ಅವರ ಬಜೆಟ್ ನಲ್ಲಿ ವೇತನ ಆಯೋಗದ ಯಾವುದೇ ವಿಚಾರ ಪ್ರಸ್ತಾಪವಾಗಿಲ್ಲ.
ಹೇಳಿಕೇಳಿ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗುವುದಕ್ಕೆ ಬಿಎಸ್ ಯಡಿಯೂರಪ್ಪ ಅವರೇ ಕಾರಣ. ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುವ ಮುನ್ನ ಹೈಕಮಾಂಡ್ ಗೆ ಬಸವರಾಜ್ ಬೊಮ್ಮಾಯಿ ಅವರನ್ನೇ ಸಿಎಂ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಬಿಎಸ್ವೈ ಅವರಿಂದಾನೇ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಪಟ್ಟಕ್ಕೆ ಏರಿದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಯಡಿಯೂರಪ್ಪ ಅವರು ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದ್ರೆ ಬಜೆಟ್ ನಲ್ಲಿ ಅದು ಸಾಧ್ಯವಾಗದೆ ಇದ್ದ ಕಾರಣ, ಸರ್ಕಾರಿ ನೌಕರ ಸಂಘದ ಅದ್ಯಕ್ಷ ಷಡಕ್ಷರಿ ಅವರು ಭೇಟಿ ಮಾಡಿದ ವೇಳೆ ಬೇಸರ ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ.