ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಎರಡು ಪಕ್ಷಗಳು ಚುನಾವಣೆಯ ಅಖಾಡಕ್ಕೆ ತಮ್ಮ ಅಭ್ಯರ್ಥಿಗಳ ಹೆಸರನ್ನು ಸೂಚಿಸಿದ್ದಾರೆ. ಆದರೆ ಬಿಜೆಪಿ ಮಾತ್ರ ಸಿಕ್ಕಾಪಟ್ಟೆ ಯೋಚನೆ ಮಾಡ್ತಾ ಇದೆ. ಮತ್ತೆ ಮತ್ತೆ ಸರ್ವೆ ಮಾಡುತ್ತಾ ಇದೆ. ನಿನ್ನೆಯೇ ಮೊದಲ ಪಟ್ಟಿ ರಿಲೀಸ್ ಮಾಡುವ ತಯಾರಿ ನಡೆಸಿತ್ತು. ಆದರೂ ಇನ್ನು ಎರಡು ದಿನಕ್ಕೆ ಮುಂದೋಗಿದೆ.
ಇದೆಲ್ಲಕ್ಕೂ ಕಾರಣ ಪ್ರಧಾನಿ ಮೋದಿಯವರ ನಿರ್ಧಾರವಂತೆ ಎನ್ನಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಒಂದಷ್ಟು ಸ್ಟಾಟರ್ಜಿ ಮಾಡಲು ಪ್ರಧಾನಿಯವರು ನಿರ್ಧರಿಸಿದ್ದಾರೆ. ಇದು ಟಿಕೆಟ್ ವಿಚಾರಕ್ಕೂ ಅನ್ವಯವಾಗಲಿದೆ. ಗುಜರಾತ್ ಮಾದರಿಯನ್ನು ಅನುಸರಿಸುವ ವಿಚಾರವೂ ಸೇರಿರಬಹುದು. ಹಾಲಿ ಶಾಸಕರು ಹಾಗೂ ಸಂಸದರ ಮಕ್ಕಳಿಗೆ ಮಣೆ ಹಾಕದೆ, ಹೊಸ ಮುಖಗಳನ್ನು ಪರಿಚಯ ಮಾಡಿಕೊಡುವ ಯೋಜನೆ ನಡೆದಿದೆ ಎನ್ನಲಾಗಿದೆ.
ಇನ್ನು ಕೆಲ ಮೂಲಗಳಿಂದ ಬಂದ ಮಾಹಿತಿ ಪ್ರಕಾರ, ಪ್ರಧಾನಿ ಮೋದಿಯವರ ಈ ನಿರ್ಧಾರದಿಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಯಾಕಂದ್ರೆ ತಾನೂ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದು, ತ್ಯಾಗ ಮಾಡಿದ್ದೆಲ್ಲ ತನ್ನ ಮಕ್ಕಳ ಭವಿಷ್ಯಕ್ಕಾಗಿ. ಈಗ ಪಕ್ಷದಿಂದ ಮಕ್ಕಳಿಗೆ ಟಿಕೆಟ್ ಸಿಗದೆ ಹೋದರೆ ಎಂಬ ಬೇಸರ ಅವರಲ್ಲಿದೆ. ಒಂದು ವೇಳೆ ಪ್ರಧಾನಿ ಮೋದಿಯವರ ನಿರ್ಧಾರದಂತೆ ಟಿಕೆಟ್ ಘೋಷಣೆಯಾದರೆ, ಬಿವೈ ವಿಜಯೇಂದ್ರ ಅವರಿಗೆ ಟಿಕೆಟ್ ಮಿಸ್ಸಾಗುವ ಸಾಧ್ಯತೆ ಇರುತ್ತದೆ.