ಪ್ರಧಾನಿ ಮೋದಿಯವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು, ಅವರು ಆ ಪ್ರಶಸ್ತಿಗೆ ಅರ್ಹರು ಎಂದು ನೊಬೆಲ್ ಪ್ರಶಸ್ತಿ ಸಮಿತಿಯ ಉಪನಾಯಕ ಆಸ್ಲೆ ಟೋಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ. ಹೀಗಾಗಿ ಅವರು ನೊಬೆಲ್ ಪ್ರಶಸ್ತಿ ಪುರಸ್ಕಾರಕ್ಕೆ ಅರ್ಹರು ಎಂದಿದ್ದಾರೆ.
ನೊಬೆಲ್ ಪ್ರಶಸ್ತಿ ಪುರಸ್ಕಾರಕ್ಕೆ ನಾವೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರ ನಾಮನಿರ್ದೇಶನ ಪಡೆಯುತ್ತಿದ್ದೇವೆ. ನೊಬೆಲ್ ಶಾಂತಿ ಪ್ರಶಸ್ತಿಗೆ ಅಗತ್ಯವಿರುವ ಕೆಲಸವನ್ನು ಪ್ರತಿಯೊಬ್ಬ ನಾಯಕನು ಮಾಡುತ್ತಾರೆ ಎಂದು ಭಾವಿಸುತ್ತೇನೆ. ಮೋ್ಇಯಂತಹ ಪ್ರಬಲ ನಾಯಕರಿಗೆ ಶಾಂತಿ ಸ್ಥಾಪಿಸುವ ಅಗಾಧ ಸಾಮರ್ಥ್ಯವಿದೆ.
ಪ್ರಧಾನಿ ಮೋದಿ ಅತ್ಯಂತ ಪ್ರಭಾವಶಾಲಿ ದೇಶದಿಂದ ಬಂದವರು. ಅವರನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗಿದೆ. ಅವರಲ್ಲಿ ಅಪಾರವಾದ ಆತ್ಮವಿಶ್ವಾಸವಿದೆ. ದೇಶವೂ ಜಗತ್ತಿನ ಸೂಪರ್ ಪವರ್ ಆಗುವತ್ತ ಮುನ್ನಡೆದಿದೆ. ಪ್ರಧಾನಿ ಮೋದಿ ಅವರಿಗೆ ಯುದ್ಧವನ್ನು ನಿಲ್ಲಿಸುವ ಸಾಮರ್ಥ್ಯವಿದೆ ಎಂದು ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿದ್ದಾರೆ.