ಮಕ್ಕಳನ್ನು ತುಂಬಾ ಹುಷಾರಾಗಿ ನೋಡಿಕೊಳ್ಳಬೇಕು. ಆದ್ರೆ ಕೆಲವೊಮ್ಮೆ ಮಕ್ಕಳು ಮಾಡುವ ಸಣ್ಣ ಸಣ್ಣ ಎಡವಟ್ಟಿನಿಂದಾಗಿ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಯೇ ಹೆಚ್ಚು. ಅಂತದ್ದೊಂದು ಘಟನೆ ಇದೀಗ ಬೆಂಗಳೂರಿನ ನಂದಿನಿ ಲೇಔಟ್ ನ ವಿಜಯಾನಂದ ನಗರದಲ್ಲಿ ಈ ಘಟನೆ ನಡೆದಿದೆ.
ಚಂದ್ರು ಮತ್ತು ಸುಪ್ರೀತ್ ಎಂಬ ಇಬ್ಬರು ಮಕ್ಕಳು ಪಾರಿವಾಳ ಹಿಡಿಯುವುದಕ್ಕೆ ಪ್ರಯತ್ನಪಟ್ಟಿದ್ದಾರೆ. ಆದ್ರೆ ಈ ವೇಳೆ ಕರೆಂಟ್ ಶಾಕ್ ತಗುಲಿ, ಜೀವನ್ಮರಣದ ಹೋರಾಟಕ್ಕೆ ಸಿಲುಕಿದ್ದಾರೆ. ಸದ್ಯ ಇಬ್ಬರು ಮಕ್ಕಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದ್ರೆ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.
ಹೈಟೆನ್ಶನ್ ವೈಯರ್ ಕಂಬಿಗೆ ತಗುಲಿದ್ದೆ ತಡ, ಕರೆಂಟ್ ಶಾಕ್ ನಿಂದ ಇಬ್ಬರು ಬಾಲಕರ ದೇಹವೂ ಶೇ.80ರಷ್ಟು ಸುಟ್ಟು ಹೋಗಿದೆ. ಅಕ್ಕಪಕ್ಕದ ಮನೆಯವರಿಗೂ ಶಾರ್ಟ್ ಸರ್ಕ್ಯೂಟ್ ಆಗಿ, ಮನೆಯೊಳಗಿನ ವಸ್ತುಗಳು ಸುಟ್ಟು ಕರಕಲಾಗಿವೆ. ಇಬ್ಬರು ಮಕ್ಕಳನ್ನು ಬರ್ನಿಂಗ್ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.