ಪಾಕಿಸ್ತಾನಕ್ಕೆ ಹೋದವರನ್ನು ವಾಪಾಸ್ ತರಬೇಕು : ವಿವಾದ ಸೃಷ್ಟಿಸಿದ್ದ ಹೇಳಿಕೆ ಹಿಂಪಡೆದ ತೇಜಸ್ವಿ ಸೂರ್ಯ..!

 

ಬೆಂಗಳೂರು: ಬಿಜೆಪಿ ಸಂಸದ ಇತ್ತೀಚೆಗೆ ಉಡುಪಿ‌ ಮಠದಲ್ಲಿ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಸಂಸದ ತೇಜಸ್ವಿ ಸೂರ್ಯ ಆ ಹೇಳಿಕೆಯನ್ನ ವಾಪಾಸ್ ತೆಗೆದುಕೊಂಡಿದ್ದಾರೆ.

ಹಿಂದೂ, ಸಂಸ್ಕೃತಿ, ಪರಂಪರೆ ಉಳಿಯಬೇಕಾದರೆ ಮೊದಲು ಹಿಂದೂ ಧರ್ಮ ಉಳಿಯಬೇಕು. ಇದಕ್ಕಾಗಿ ಮತಾಂತರಗೊಂಡವರನ್ನು ವಾಪಾಸ್ ಕರೆಸಬೇಕು. ಮತಾಂತರಗೊಂಡು ಪಾಕಿಸ್ತಾನ, ಚೀನಾ, ಜಪಾನ್ ಗೆ ಹೋದವರನ್ನು ವಾಪಾಸ್ ಕರೆಸಬೇಕು. ಮುಸ್ಲಿಂ, ಕ್ರೈಸ್ತರನ್ನು ಘರ್ ವಾಪಾಸಿ ಮಾಡದೆ ದಾರಿ ಇಲ್ಲ ಎಂದಿದ್ದರು.

ಈ ಹೇಳಿಕೆ ಸಿಕ್ಕಾಪಟ್ಟೆ ವಿವಾದ ಸೃಷ್ಟಿ ಮಾಡಿತ್ತು. ಆ ಹೇಳಿಕೆ ಸಂಬಂಧ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ. ಭಾರತದಲ್ಲಿ ಹಿಂದೂ ಪುನರುತ್ಥಾನವಾಗಬೇಕೆಂದು ಮಾತನಾಡಿದ್ದೆ. ಆ ವಿಚಾರ ವಿವಾದ ಸೃಷ್ಟಿಸಿದೆ. ಹಾಗಾಗಿ ಹೇಳಿಕೆಯನ್ನ ಹಿಂಪಡೆಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *