ನಾಳೆ ಪ್ರಜಾಪ್ರಭುತ್ವದ ಹಬ್ಬ. ರಾಜ್ಯದ ಆಡಳಿತವನ್ನು ಸರಿಯಾದ ನಾಯಕನಿಗೆ ಒಪ್ಪಿಸುವಂತ ದಿನ. ಈ ದಿನವನ್ನು ಎಲ್ಲರೂ ಜವಬ್ದಾರಿಯಿಂದ ಮಾಡಬೇಕು. ಎಲ್ಲರೂ ಮತದಾನವನ್ನು ತಪ್ಪದೇ ಮಾಡಲೇಬೇಕೆಂದೇ ಮತದಾನದ ದಿನವನ್ನು ಸರ್ಕಾರಿ ರಜೆಯಾಗಿ ಘೋಷಣೆ ಮಾಡಲಾಗಿದೆ. ಆದ್ರೆ ಮತದಾನದ ದಿನವನ್ನು ಹಲವರು ರಜೆ ಮಜಾ ಥರ ಟ್ರೀಟ್ ಮಾಡುತ್ತಾರೆ. ಪ್ರವಾಸಿ ಕೇಂದ್ರಗಳಿಗೆ ತೆರಳುತ್ತಾರೆ. ಇದೀಗ ಪ್ರವಾಸಿ ತಾಣಗಳಲ್ಲಿ ಜನರನ್ನೇ ಬಂದ್ ಮಾಡಲಾಗಿದೆ ನಾಳೆಗೆ.
ಪ್ತವಾಸಕ್ಕೆಂದು ಹೊರಟಾಗ ಮೊದಲು ನೆನಪಾಗುವುದು ಕೊಡಗು ಜಿಲ್ಲೆ. ಈಗ ಬೇರೆ ಮಳೆ ಬೇರೆ ಶುರುವಾಗಿದೆ. ಹೀಗಾಗಿ ಪ್ರಕೃತಿಯ ಸೌಂದರ್ಯ ನೋಡುವುದಕ್ಕೆ ಎಲ್ಲರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಕೊಡಗಿಗೆ ರಾಜ್ಯ, ಹೊರ ರಾಜ್ಯದಿಂದಾನೂ ಪ್ರವಾಸಿಗರು ಬರುತ್ತಾರೆ. ನಾಳೆ ಹೊರ ರಾಜ್ಯದವರಿಗೆ ಯಾವುದೇ ನಿರ್ಬಂಧವಿಲ್ಲ. ಆದರೆ ನಮ್ಮ ರಾಜ್ಯದವರು ಬರಬೇಕು ಎಂದರೆ, ಮತದಾನ ಮಾಡಿದ ಗುರುತನ್ನು ತೋರಿಸಿದರೆ ಮಾತ್ರ ಅನುಮತಿ ನೀಡಲಾಗುತ್ತದೆ ಎಂದಿದ್ದಾರೆ.
ಅಷ್ಟೇ ಅಲ್ಲ ರಾಜ್ಯದಲ್ಲೂ ನಂದಿ ಬೆಟ್ಟಕ್ಕೆ ಹೋಗುವ ಜನರ ಸಂಖ್ಯೆ ಏನು ಕಡಿಮೆ ಇಲ್ಲ. ರಜಾ ಅಂದ್ರೆ ಸಾಕು ನಂದಿ ಬೆಟ್ಟಕ್ಕೆ ಪ್ಲ್ಯಾನ್ ಮಾಡಿಕೊಂಡು ಬಿಡುತ್ತಾರೆ. ನಾಳೆ ಮತದಾನ ಇರುವ ಕಾರಣ ನಂದಿ ಬೆಟ್ಟಕ್ಕೆ ಪ್ರವಾಸಿಗರ ನಿರ್ಬಂಧ ಹೇರಲಾಗಿದೆ.