ನಾರಾಯಣಪುರದಲ್ಲಿ ನಾಯಿಗಳ ಕಾಟ : 17 ಜನರಿಗೆ ಕಡಿತ..!

suddionenews
1 Min Read

 

ಬೀದರ್: ಕೆಲವೊಂದು ಕಡೆ ಬೀದಿ ನಾಯಿಗಳ ಕಾಟ ಹೆಚ್ಚಾಗಿರುತ್ತದೆ. ಬೀದಿ ನಾಯಿ, ಹುಚ್ಚು ನಾಯಿಗಳ ಕಾಟಕ್ಕೆ ಹಲವರು ಬಲಿ ಕೂಡ ಆಗಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 17 ಜನರಿಗೆ ಹುಚ್ಚು ನಾಯಿ ಕಚ್ಚಿರುವಂತ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.

ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಎರಡು ದಿನದಿಂದ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಮನುಷ್ಯರು ಮಾತ್ರವಲ್ಲ ಹಸು, ಎಮ್ಮೆಗಳಿಗೂ ಕಚ್ಚಿದೆ. ಹೀಗಾಗಿ ಗ್ರಾಮಸ್ಥರೆಲ್ಲ ಭಯದಿಂದಾನೇ ಕಾಲ ಕಳೆಯುತ್ತಿದ್ದಾರೆ. ಈಗಾಗಲೇ ಆಸ್ಪತ್ರೆಯ ಬೆಡ್ ಗಳು ತುಂಬಿವೆ.

ಬೆನ್ನು ಹಾಗೂ ಕುತ್ತಿಗೆಗೆ ಹುಚ್ಚು ನಾಯಿ ಕಚ್ಚಿದೆ. ಎರಡು ದಿನದಿಂದ ಈ ರೀತಿಯ ಸಮಸ್ಯೆ ಎದುರಾಗಿದ್ರು ಕೂಡ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ. ಜನರು ಮನೆಯಿಂದ ಹೊರಗೆ ಬರುವುದಕ್ಕೇನೆ ಭಯ ಪಡುತ್ತಿದ್ದಾರೆ. ಸದ್ಯ ಗಾಯಾಳುಗಳು ಬಸವ ಕಲ್ಯಾಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *