ಆಂಧ್ರ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ವೈಎಸ್ಆರ್ ಕಾಂಗ್ರೆಸ್ ಪಕ್ಷದ ವಿರುದ್ಧ TDP ಮುಖ್ಯಸ್ಥ ಚಂದ್ರಬಾಬು ನಾಯ್ಡು ಸವಾಲು ಹಾಕಿದ್ದಾರೆ. ನೀನಾ.. ನಾನಾ ಎಂಬ ಸವಾಲನ್ನು ಹಾಕಿದ್ದಾರೆ.
ನೀವು ದೊಣ್ಣೆ ತೆಗೆದುಕೊಂಡು ಬಂದ್ರೆ ನಾನು ದೊಣ್ಣೆ ತೆಗೆದುಕೊಂಡು ಬರ್ತೀನಿ. ನೀವೂ ಯುದ್ಧ ಘೋಷಿಸಿದರೆ ನಾನು ಯುದ್ಧ ಘೋಷಿಸುತ್ತೇನೆ. ನಮ್ಮ ಕಾರ್ಯಕರ್ತರ ಒಂದೊಂದು ಹನಿ ರಕ್ತವೂ ನನ್ನ ರಕ್ತವೆ. ಹುಷಾರ್.. ಹುಷಾರ್ ಎಂದು ಚಂದ್ರ ಬಾಬು ನಾಯ್ಡು ಸವಾಲು ಹಾಕಿದ್ದಾರೆ.
ಆಗಸ್ಟ್ 4ರಂದು ಚಿತ್ತೂರು ಜಿಲ್ಲೆಯ ಅನ್ನಮಯ್ಯದಲ್ಲಿ ಹಿಂಸಾಚಾರ ನಡೆದಿತ್ತು. YSR ಕಾಂಗ್ರೆಸ್ ಹಾಗೂ TDP ಕಾರ್ಯಕರ್ತ ಮಧ್ಯೆ ಮಾರಾಮಾರಿ ನಡೆದಿದ್ದು ರಕ್ತಪಾತವೇ ಹರಿದಿತ್ತು. ಈ ಘಟನೆಯಲ್ಲಿ ಪೊಲೀಸರು ಸೇರಿದಂತೆ YSRC ಹಾಗೂ TDP ಪಕ್ಷದ 20ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿದ್ದರು. ಹಿಂಸಾಚಾರದ ಮಧ್ಯೆ ಹಲವು ವಾಹನಗಳು ಜಖಂಗೊಂಡಿದ್ದವು. ಈ ಘಟನೆ ಸಂಬಂಧ ಸಿಎಂ ಜಗನ್ ಸರ್ಕಾರ TDP ಮುಖ್ಯಸ್ಥ ಚಂದ್ರಬಾಬು ನಾಯ್ಡು ವಿರುದ್ಧ ಎರಡು ಎಫ್ಐಆರ್ ದಾಖಲಿಸಿದೆ.
ಇನ್ನು ಆರು ತಿಂಗಳಲ್ಲಿ ಆಂಧ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಈಗಾಗಲೇ ಪ್ರಚಾರ ಕಾರ್ಯ ಆರಂಭವಾಗಿದೆ. ಚಂದ್ರಬಾಬು ನಾಯ್ಡು ಕೂಡ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇದರ ನಡುವೆ ವೈಎಸ್ಆರ್ಸಿ ಹಾಗೂ ಟಿಡಿಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಈ ಪ್ರಕರಣ ಸಂಬಂಧ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸುವ ಸಾಧ್ಯತೆ ಇದೆ.