ಕಳೆದ ಕೆಲವು ದಿನಗಳಿಂದ ಐಪಿಎಸ್ ಆಫೀಸರ್ ಡಿ ರೂಪಾ ಅವರು ಸೋಷಿಯಲ್ ಮೀಡಿಯಾದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದಿದ್ದಾರೆ. ಹಗರಣಗಳ ಜೊತೆಗೆ ಡಿಕೆ ರವಿ ವಿಚಾರವನ್ನು ತೆಗೆದಿದ್ದರು. ಇದು ದಿನೇ ದಿನೇ ತಾರಕ್ಕೇರಿದ್ದು, ಇಬ್ಬರು ಸಿಎಂ ಕಚೇರಿಗೆ ಹೋಗಿ ದೂರು ಕೂಡ ನೀಡಿ ಬಂದಿದ್ದಾರೆ.
ಡಿಕೆ ರವಿ ಅವರ ವಿಚಾರವಾಗಿ ಅವರ ಪತ್ನಿ ಕುಸುಮಾ ಕೂಡ ಪ್ರತಿಕ್ರಿಯೆ ನೀಡಿದ್ದರು. ಇದೀಗ ಅವರ ತಾಯಿ ಗೌರಮ್ಮ ಕೂಡ ಮಾತನಾಡಿದ್ದಾರೆ. ನನ್ನ ಮಗನ ವಿಚಾರವಾಗಿ ನಾನು ಯಾರ ಬಗ್ಗೆಯೂ ಆರೋಪ ಹೊರಿಸಲ್ಲ. ಆ ಇಬ್ಬರ ನಡುವೆ ಏನು ನಡೆದಿದೆ ಗೊತ್ತಿಲ್ಲ. ಆದರೆ ಇದರ ನಡುವೆ ನನ್ನ ಮಗನನ್ನು ಎಳೆಸು ತರೋದು ಒಳ್ಳೆಯದ್ದಲ್ಲ.
ಸಿಂಧೂರಿ ಅಮ್ಮನು ಕೂಡ ನನ್ನ ಮಗನ ಬಗ್ಗೆ ಮಾತನಾಡಬಾರದು. ರೂಪ ಕೂಡ ಮಾತನಾಡಬಾರದು. ಅವರಿಬ್ಬರನ್ನು ನಾನು ಕೇಳೋದು ಇಷ್ಟೇ ಎಂದಿದ್ದಾರೆ. ಐಪಿಎಸ್ ಅಧಿಕಾರಿ ಡಿ ರೂಪಾ ಅವರ ಫೇಸ್ ಬುಕ್ ನಲ್ಲಿ ರೋಹಿಣಿ ಅವರ ವಿರುದ್ಧ ಕೆಂಡಕಾರುತ್ತಿದ್ದಾರೆ. ಖಾಸಗಿ ಪೋಟೋಗಳೆಂದು ಸಹಜ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಿಂದ ಹಲವರು ಪರ ವಿರೋಧವಾಗಿ ಸೋಷಿಯಲ್ ಮೀಡಿಯಾದಲ್ಲಿಯೇ ಕಮೆಂಟ್ ಹಾಕುತ್ತಿದ್ದಾರೆ.