ನದಿ ನೀರಿಗೆ ಪಂಪ್ ಮಾಡುವುದರಿಂದ ಎಷ್ಟೆಲ್ಲಾ ಸಮಸ್ಯೆ..? ಪರಿಹಾರವೇನು..? ಡಿಕೆ ಶಿವಕುಮಾರ್ ಚರ್ಚೆ

1 Min Read

 

 

ಬೆಂಗಳೂರು: ಇಂದು ಎರಡನೇ ದಿನದ ಅಧಿವೇಶನ ಶುರುವಾಗಿದ್ದು, ಚಾನೆಲ್ ಗಳಲ್ಲಿ ನದಿ ನೀರಿಗೆ ಮೋಟಾರ್ ಹಾಕಿ ನೀರೆತ್ತುವ ಸಮಸ್ಯೆ ಹಲವು ಕಡೆ ಇದೆ. ಅದಕ್ಕೆ ಪರಿಹಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಇಂದು ಅಧಿವೇಶನದಲ್ಲಿ ಮಾತನಾಡಿದ್ದಾರೆ.

ಮಂಡ್ಯ, ಹಾಸನ, ಬಾಗಲಕೋಟೆ, ಬೀದರ್, ಗುಲ್ಬರ್ಗ ಸೇರಿದಂತೆ ಹಲವೆಡೆ ನೀರಾವರಿ ಇರುವ ಕಡೆ ಸಮಸ್ಯೆ ಇದೆ. ಎಲ್ಲಿಯೂ ನೀರು ಹೋಗ್ತಾ ಇಲ್ಲ. ಪಂಪ್‌ಮಾಡಿ ಬಿಟ್ಟು ನೀರು ಬಿಡಲಾಗಿದೆ. ಮೊನ್ನೆ ಕೂಡ ಈ ಬಗ್ಗೆ ವ್ಯಾಪಕ ಚರ್ಚೆ ಮಾಡಿದ್ದೇವೆ. ನಾವೀಗ ಎತ್ತಿನಹೊಳೆ ಮಾಡ್ತಾ ಇದ್ದೀವಿ. ಅದಕ್ಕೆ ಈಗಾಗಲೇ 25 ಕೋಟಿ ಖರ್ಚಾಗಿದೆ. ನನಗೆ, ನಮ್ಮ ಶಾಸಕರಿಗೂ ಭಯ ಆಗ್ತಾ ಇದೆ. ತುಮಕೂರು ನೀರು ಮುಟ್ಟುವ ಹಂತದಲ್ಲಿ ಇದೆ. ಪ್ರಾಜೆಕ್ಟ್ ಇರುವುದು ಎರಡು ತಿಂಗಳು ನೀರು ತೆಗೆಯುವುದಕ್ಕೆ.

ಕೆನಾಲ್ ಗೆಲ್ಲಾ ಬೋರ್ ಗಳನ್ನ ಹಾಕಿ ಬಿಡ್ತಾರೆ, ನೀರನ್ನ ತೆಗಿತಾರೆ. ಉತ್ತರ ಕರ್ನಾಟಕ ಭಾಗದಲ್ಲಿ 90 ಪರ್ಸೆಂಟ್ ನೀರು ಹೋಗುವುದರೊಳಗೆ ಸೈಫನ್ ಮಾಡ್ತಾ ಇದಾರೆ. ಅದಕ್ಕೆ ಏನಾದರೂ ಕ್ರಮ ತೆಗೆದುಕೊಳ್ಳಿ ಎನ್ನುತ್ತಾರೆ. ಅಲ್ಲಿನ ಅಧಿಕಾರಿಗಳು ಏನು ಮಾಡುವುದಕ್ಕೆ ಆಗಲ್ಲ. ಅಲ್ಲಿನ ಲೋಕಲ್ ಲೀಡರ್ಸ್, ನಾವುಗಳು ಒಂದು ತೀರ್ಮಾನ ಮಾಡಬೇಕು. ಚಾನೆಲ್ ಮಾಡಿದ್ದು ಯಾಕೆ. ನೀರು ಕೆಳಗಡೆ ತನಕ ಹರಿಯಬೇಕು. ನಾವು ಹಾಗೂ ಶಾಸಕರು ರೈತರಿಗೆ ಹೇಳಬೇಕು.

ಎಲ್ಲರೂ ಒಪ್ಪುವುದಾದರೆ ಅದನ್ನ ಹೇಗೆ ನಿಯಂತ್ರಣ ಮಾಡಬೇಕೆಂದು ನಾನು ಎಕ್ಸಾಮಿನ್ ಮಾಡಿದ್ದೀನಿ. ಆ ನೀರು 50 ಪರ್ಸೆಂಟ್ ಕೂಡ ಹೋಗಿಲ್ಲ ಅಂದ್ರೆ ನಾವೂ ಪ್ರಾಜೆಕ್ಟ್ ಮಾಡಿ ಏನು ಸುಖ. ನೀರನ್ನ ಲಿಫ್ಟ್ ಮಾಡ್ತಾ ಇದ್ದೀವಿ. ಇವ್ರು ನೀರನ್ನ ಚಾನೆಲ್ ನಿಂದ ಲಿಫ್ಟ್ ಮಾಡಿಕೊಂಡು ಹತ್ತತ್ತು ಕಿಲೋ ಮೀಟರ್ ತೆಗೆದುಕೊಂಡು ಹೋದ್ರೆ ಯಾವ ರೈತರಿಗೆ ಅನುಕೂಲವಾಗುತ್ತೆ. ನಾವೂ ಇದನ್ನ ಗಮನ ಹರಿಸುತ್ತೇವೆ. ಇನ್ನೊಂದು ವಾರದಲ್ಲಿಯೇ ಅದಕ್ಕೆ ಬಿಲ್ ತರುತ್ತೇನೆ. ಚರ್ಚೆ ಮಾಡೋಣಾ. ನೀವೂ ಒಪ್ಪಿಗೆ ಕೊಟ್ಟರೆ ಅದನ್ನ ಮುಂದುವರೆಸೋಣಾ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *