ನವದೆಹಲಿ: ಈಗಾಗಲೇ ಯೋಧರಿಗೆ ಸಮವಸ್ತ್ರ ಇದೆ. ಆದ್ರೆ ಇದೀಗ ಹೊಸದಾದ ರೀತಿಯಲ್ಲಿ ಸಮವಸ್ತ್ರ ತಯಾರಿ ಮಾಡಲಾಗಿದೆ. ಆ ಸಮವಸ್ತ್ರ ಯೋಧರ ದಿನದಂದೇ ಅನಾವರಗೊಂಡಿದೆ. ಈ ಹೊಸ ಸಮವಸ್ತ್ರ ವಿಭಿನ್ನವಾಗಿದ್ದು, ಹಲವು ವಿಶೇಷತೆಗಳನ್ನ ಒಳಗೊಂಡಿದೆ.
ಸೇನಾ ಸಮವಸ್ತ್ರವನ್ನು ಧರಿಸಿ ಪ್ಯಾರಾಚೂಟ್ ರೆಜಿಮೆಂಟ್‌ನ ಕಮಾಂಡೋಗಳ ತುಕಡಿ ಸೇನಾ ದಿನದ ಪಥಸಂಚನದಲ್ಲಿ ಭಾಗವಹಿಸಿತ್ತು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ಸಹಯೋಗದಲ್ಲಿ ಭಾರತ ಸೇನಾಪಡೆಯು ಹೊಸ ಸಮವಸ್ತ್ರ ಸಿದ್ಧ ಮಾಡಿದೆ.
ಬ್ರಿಟಿಷ್ ಸೈನ್ಯವು ಬಳಸುವ ಮಾದರಿಯಂತೆ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ವಿವಿಧ ದೇಶಗಳ ಸೇನಾ ಸಮವಸ್ತ್ರಗಳ ವಿಶ್ಲೇಷಣೆ ಮತ್ತು ವಿಸ್ತೃತ ಚರ್ಚೆ ನಂತರ ಫೈನಲ್ ಮಾಡಲಾಗಿದೆ. ಹವಾಮಾನ ಏರಿಳಿತವನ್ನು ಎದುರಿಸಲು ಪೂರಕವಾದ ಸಮವಸ್ತ್ರ ಇದಾಗಿದೆ. ಸೇನಾ ಸಿಬ್ಬಂದಿ ಬಿಸಿಲು, ಚಳಿ, ಮಳೆ-ರಾತ್ರಿ, ಹಗಲೆನ್ನದೇ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುತ್ತಾರೆ. ಅವರಿಗೆ ಅನುಕೂಲವಾಗಲೆಂದು ಈ ಹೊಸ ಸಮವಸ್ತ್ರ ಸಿದ್ಧ ಮಾಡಲಾಗಿದೆ.