ದೇವಿ ಇರುವ ನೆಕ್ಲೇಸ್ ಧರಿಸಿದ್ದಕ್ಕೆ ನಟಿ‌ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು..!

1 Min Read

 

ನೇರ ನುಡಿ, ನಡೆಯಿಂದಾನೇ ಖ್ಯಾತಿ ಪಡೆದಿರುವ ನಟಿ ತಾಪ್ಸಿ ಪನ್ನು ಇದೀಗ ಹಿಂದೂ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಸಿಲುಕಿಕೊಂಡಿದ್ದಾರೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ನಟಿ ತಾಪ್ಸಿ ಪನ್ನು ವಿರುದ್ಧ ಬಿಜೆಪಿ ಶಾಸಕಿ ಮಾಲಿ‌ನಿ ಗೌರ್ ಪುತ್ರ ಏಕಲವ್ಯ ಗೌರ್ ದೂರು ದಾಖಲಿಸಿದ್ದಾರೆ. ಮಧ್ಯಪ್ರದೇಶದ ಇಂದೋರ್ ನಲ್ಲಿ ದೂರು ನೀಡಿದ್ದಾರೆ.

ಮುಂಬೈನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ತಾಪ್ಸಿ ಪನ್ನು ಭಾಗಿಯಾಗಿದ್ದರು. ಈ ಫ್ಯಾಷನ್ ವೀಕ್ ನಲ್ಲಿ ಅರ್ಧಂಬರ್ಧ ದೇಹ ಕಾಣುವ ರೀತಿಯಲ್ಲಿ ಕೆಂಪು ಬಣ್ಣದ ಬಟ್ಟೆ ತೊಟ್ಟಿದ್ದರು. ಅದರ ಜೊತೆಗೆ ನೆಕ್ಲೆಸ್ ಹಾಕಿರುವುದೆ ಇದಕ್ಕೆ ಕಾರಣವಾಗಿದೆ. ಆ ನೆಕ್ಲೆಸ್ ನಲ್ಲಿ ಲಕ್ಷ್ಮೀಯ ಭಾವಚಿತ್ರವಿದೆ.

ಲಕ್ಷ್ಮೀ ದೇವಿ ಇರುವ ನೆಕ್ಲೆಸ್ ಹಾಕಿಕೊಂಡಿದ್ದ ತಾಪ್ಸಿ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಅಶ್ಲೀಲ ಬಟ್ಟೆ ಜೊತೆಗೆ ಲಕ್ಷ್ಮೀ ಡಾಲರ್ ಧರಿಸುವುದು ಒಳ್ಳೆಯದಲ್ಲ ಎಂದು ಕಮೆಂಟ್ ಹಾಕುತ್ತಿದ್ದಾರೆ.ತಾಪ್ಸಿ ಪನ್ನು ವಿರುದ್ಧ ಹಲವರು ಗರಂ ಆಗಿದ್ದಾರೆ. ಈ ಫೋಟೋ, ಕಮೆಂಟ್ ಗಳನ್ನೇ ಆಧಾರವಾಗಿಟ್ಟುಕೊಂಡು ಏಕಲವ್ಯ ಗೌರ್ ದೂರು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks