ನವದೆಹಲಿ: ಡಿಕೆ ಶಿವಕುಮಾರ್ ಕೂಡ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಹೈಕಮಾಂಡ್ ಮಾಡಿದ ಸಂಧಾನಕ್ಕೆ ಒಪ್ಪಿಗೆ ಸೂಚಿಸಿ, ಡಿಸಿಎಂ ಹುದ್ದೆಗೆ ತೃಪ್ತಿಪಟ್ಟುಕೊಂಡಿದ್ದಾರೆ. ಒಂದೇ ಡಿಸಿಎಂ ಹುದ್ದೆಗೆ ಸೀಮಿತವಾಗಬೇಕು ಎಂಬ ಷರತ್ತಿನೊಂದಿಗೆ. ಆದರೆ ಇದೀಗ ಅದೇ ವಿಚಾರ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಸಾಕಷ್ಟು ಜನ ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಒಂದಕ್ಕಿಂತ ಹೆಚ್ಚು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಾಗುತ್ತೆ ಎಂದುಕೊಳ್ಳಲಾಗಿತ್ತು. ಆದರೆ ಡಿಕೆ ಶಿವಕುಮಾರ್ ಅವರ ಷರತ್ತಿನ ಪ್ರಕಾರ ಒಂದೇ ಡಿಸಿಎಂ ಹುದ್ದೆ ಇರಲಿದೆ. ಇದೀಗ ನಮಗೂ ಡಿಸಿಎಂ ಹುದ್ದೆ ನೀಡಿ ಎಂದು ಕಾಂಗ್ರೆಸ್ ನ ಹಿರಿಯ ನಾಯಕರು ವರಸೆ ಶುರಿ ಮಾಡಿದ್ದಾರೆ. ಇದು ಕಾಂಗ್ರೆಸ್ ಹೈಕಮಾಂಡ್ ಗೆ ಮತ್ತೆ ಸಂಕಷ್ಟ ತಂದೊಡ್ಡಿದೆ.
ಡಾ. ಜಿ ಪರಮೇಶ್ವರ್, ಲಕ್ಷ್ಮಣ ಸವದಿ, ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್ ಡಿಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ಪಕ್ಷದಲ್ಲಿನ ನಮ್ಮ ಸೇವೆ ಮತ್ತು ಹಿರಿಯತನಕ್ಕೆ ಗೌರವ ನೀಡಿ, ಡಿಸಿಎಂ ಹುದ್ದೆ ನೀಡುವಂತೆ ಆಗ್ರಹಿಸಿದ್ದಾರೆ.