ಮಂಡ್ಯ : ಈ ಹಿಂದೆ ಕುಮಾರಸ್ವಾಮಿ ಅವರು ಚುನಾವಣಾ ಸಮಯದಲ್ಲಿ ಹಾಕಿದ್ದ ಕಣ್ಣೀರು ಬಹಳಷ್ಟು ಟೀಕೆಗೆ ಗುರಿಯಾಗಿತ್ತು. ಇದೀಗ ಪರಿಷತ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ನಾನ್ ಇನ್ಮುಂದೆ ಕಣ್ಣೀರು ಹಾಕಲ್ಲ ಎಂದಿದ್ದಾರೆ. ಜನರ ಕಷ್ಟ ಕಂಡರೆ ಕಣ್ಣೀರು ಬರುತ್ತೆ. ನಂದು ಕಟುಕ ಹೃದಯವಲ್ಲ. ಆದ್ರೆ ಇನ್ಮುಂದೆ ನಾನು ಕಣ್ಣೀರು ಹಾಕಲ್ಲ ಎಂದಿದ್ದಾರೆ.
ನಾನು ಸಿಎಂ ಆಗಿದ್ದಾಗ ಕನಗನಮರಡಿಯಲ್ಲಿ ಸಂಭವಿಸಿದ ಬಸ್ ದುರಂತ ನನ್ನ ಕಣ್ಣಲ್ಲಿ ನೀರು ತರಿಸಿತ್ತು. ಅದನ್ನೇ ಕೆಲವರು ಹೀಯಾಳಿಸಿದರು. ಟವೆಲ್ ನಲ್ಲಿ ಗ್ಲಿಸರಿನ್ ಹಾಕೊಂಡು ಅಳ್ತಿದ್ದಾರೆ ಅಂತ ವ್ಯಂಗ್ಯ ಮಾಡಿದ್ರು ಹೀಗಾಗಿ ಇನ್ಮುಂದೆ ನಾನು ಕಣ್ಣೀರು ಹಾಕಲ್ಲ ಎಂದಿದ್ದಾರೆ.
ಇನ್ನು ಮೈತ್ರಿ ವಿಚಾರವಾಗಿ ಮಾತನಾಡಿ, ನಾನು ಮೈತ್ರಿ ಮಾಡಿಕೊಳ್ಳುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಕೆಲವು ದಿನಗಳ ಹಿಂದೆ ದೇವೇಗೌಡರು ಪ್ರಧಾನಿ ಮೋದಿಯವರನ್ನ ಭೇಟಿಯಾಗಿದ್ದರ ಬಗ್ಗೆ ಹೇಳಿದ ಅವರು, ಕಾಂಗ್ರೆಸ್ ನಾಯಕರು ನಮ್ಮ ಸಹಕಾರವನ್ನೂ ಕೇಳಿಲ್ಲ, ಆದರೆ ಯಡಿಯೂರಪ್ಪ ಅವರು ಕೇಳಿದ್ದಾರೆ, ಆ ಬಗೆಗೆ ನಾನಿನ್ನು ನಿರ್ಧರಿಸಿಲ್ಲ. ನಾಳೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಕರೆದು ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ