ಬೆಂಗಳೂರು: ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದೆ. ಪಕ್ಷಗಳು ಸ್ಪರ್ಧಿಗಳ ಹೆಸರನ್ನು ಸೂಚಿಸುತ್ತಾ ಇದ್ದಾರೆ. ಇದೀಗ ಚಾಮರಾಜಪೇಟೆಯಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಕಮಿಷನರ್ ನಡುವೆ ಜಿದ್ದಾಜಿದ್ದಿನ ಕಣ ನಿರ್ಮಾಣವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ನ ಪ್ರಬಲ ಅಭ್ಯರ್ಥಿಯಾಗಿರುವ ಭಾಸ್ಕರ್ ರಾವ್ ವಿರುದ್ಧ ಬಿಜೆಪಿ ಈ ಬಾರಿ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.
ರೌಡಿಶೀಟರ್ ಸೈಲೆಂಟ್ ಸುನೀಲ ಚಾಮರಾಜಪೇಟೆಯ ಟಿಕೆಟ್ ಆಕಾಂಕ್ಷಿಯಾಗಿದ್ದ. ಬಿಜೆಪಿ ಕೂಡ ಸೈಲೆಂಟ್ ಸುನೀಲನಿಗೆ ಟಿಕೆಟ್ ನೀಡಲಿದೆ ಎಂಬ ಚರ್ಚೆಗಳು ಶುರುವಾಗಿತ್ತು. ಆದರೆ ಅದನ್ನು ಮೀರಿ ಈಗ ಭಾಸ್ಕರ್ ರಾವ್ ಅವರಿಗೆ ಟಿಕೆಟ್ ನೀಡಲಿದ್ದಾರೆ. ಸೈಲೆಂಟ್ ಸುನೀಲನನ್ನ ಸೈಡ್ ಲೈನ್ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.
ಬಿಜೆಪಿಯಿಂದ ಇಂದು ಮೊದಲ ಪಟ್ಟಿ ರಿಲೀಸ್ ಆಗಲಿದೆ. ಈ ಒಟ್ಟಿಯಲ್ಲಿ ಭಾಸ್ಕರ್ ರಾವ್ ಹೆಸರನ್ನು ಚಾಮರಾಜ ಪೇಟೆಗೆ ಸೂಚಿಸಲಾಗಿದೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಎಂಟ್ರಿಯಾಗಿದ್ದ ಭಾಸ್ಕರ್ ರಾವ್ ಮೊದಲಿಗೆ ಎಎಪಿ ಪಕ್ಷಕ್ಕೆ ಸೇರಿದ್ದರು. ಕೆಲವೇ ದಿನಗಳಲ್ಲಿ ಅಲ್ಲಿಂದ ಬುಜೆಪಿಗೆ ಬಂದಿದ್ದರು. ಬಿಜೆಪಿಗೆ ಬಂದ ಮೇಲೆ ಬಸವನಗುಡಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಈಗ ಬಿಜೆಪಿಯಿಂದ ಚಾಮರಾಜಪೇಟೆಗೆ ಟಿಕೆಟ್ ನೀಡಲಾಗಿದೆ ಎನ್ನಲಾಗಿದೆ.