ತುಮಕೂರು: ಜೆಡಿಎಸ್ ನಿಂದ ರೆಬಲ್ ಆದ ಬಳಿಕ ಗುಬ್ಬಿ ಶಾಸಕ ಶ್ರೀನಿವಾಸ್ ಕಾಂಗ್ರೆಸ್ ಸೇರುತ್ತಾರೆ ಎಂಬ ವಿಚಾರ ಓಡಾಡುತ್ತಾ ಇತ್ತು. ಅದಕ್ಕೆ ಪುಷ್ಟಿ ನೀಡುವಂತೆ ಭಾರತ್ ಜೋಡೋ ಯಾತ್ರೆ ತುಮಕೂರಿಗೆ ಬಂದಾಗ ಯಾತ್ರೆಯಲ್ಲಿ ಶಾಸಕ ಶ್ರೀನಿವಾಸ್ ಕೂಡ ಭಾಗಿಯಾವಿದ್ದರು. ಇದನ್ನು ಕಂಡು ಕಾಂಗ್ರೆಸ್ ಸೇರುವುದು ಕನ್ಫರ್ಮ್ ಎಂದುಕೊಳ್ಳಲಾಗಿತ್ತು. ಆದರೆ ಈ ಊಹಾಪೋಹಾಗಳಿಗೆಲ್ಲಾ ಶಾಸಕ ಶ್ರೀನಿವಾಸ್ ಉತ್ತರ ನೀಡಿದ್ದಾರೆ.
ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಅವರು ಪಕ್ಷಕ್ಕೆ ಬನ್ನಿ ಅಂತ ಆಹ್ವಾನಿಸಿಲ್ಲ, ಚರ್ಚೆ ನಡೆಸಿದ್ದೇವೆ ಅಷ್ಟೇ. ಅದು ಪಕ್ಷಾತೀತ ಕಾರ್ಯಕ್ರಮ ಆಗಿರುವ ಕಾರಣ ಭಾಗವಹಿಸಿದ್ದೇನೆ. ಪಾದಯಾತ್ರೆಯಲ್ಲಿ ಭಾಗಿಯಾಗುವ ಕುರಿತು ಮೊದಲೇ ಹೇಳಿದ್ದೆ. ರಾಷ್ಟ್ರೀಯ ನಾಯಕರು ಬಂದಾಗ ಸ್ವಾಗತಿಸೋದು ನಮ್ಮ ಕರ್ತವ್ಯ. ಡಿಸೆಂಬರ್ ಬಳಿಕ ಬೆಂಬಲಿಗರ ಜೊತೆ ಚರ್ಚಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.