ಗದಗ: ಕೆಲಸ ಮುಗಿಸಿ ರಾತ್ರಿ 12 ಗಂಟೆಯ ನಂತರ ಮನೆಗೆ ಬರುತ್ತಿದ್ದ ಪೊಲೀಸ್ ಪೇದೆ ಅಪಘಾತದಲ್ಲಿ ಬಲಿಯಾಗಿದ್ದಾರೆ. ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. 59 ವರ್ಷದ ಕೊಟ್ರೆಪ್ಪ ಬಂಡಗಾರ ಸಾವನ್ನಪ್ಪಿದ ಕಾನ್ಸ್ಟೇಬಲ್.
ಮಂಡರಗಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಸ್ಟೇಬಲ್ ಆಗಿ ಸೇವೆ ನಿರ್ವಹಿಸುತ್ತಿದ್ದ ಬಂಡೆಪ್ಪ, ಜಂತ್ಲಿಶಿರೂರಿನಲ್ಲಿ ವಾಸವಾಗಿದ್ದರು. ಡಂಬಳಕ್ಕೆ ಕರ್ತವ್ಯದ ಮೇಲೆ ಹೋಗಿದ್ದರು. ಕರ್ತವ್ಯ ಮುಗಿಸಿ ರಾತ್ರಿ 12 ಗಂಟೆಗೆ ಮನೆ ಕಡೆಗೆ ಹೋಗುತ್ತಿದ್ದರು. ಈ ವೇಳೆ ಅಪರಿಚಿತ ಟ್ರ್ಯಾಕ್ಟರ್ ಒಂದು ಗುದ್ದಿ ಪರಾರಿಯಾಗಿದೆ.
ವಾಹನ ಗುದ್ದಿದ ಪರಿಣಾಮ, ಕೊಟ್ರೆಪ್ಪ ಸಾವನ್ನಪ್ಪಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಮುಂಡರಗಿಯಲ್ಲಿಯೇ ಪೇದೆಯಾಗಿ ಸೇವೆ ಸಲ್ಲಿಸುತ್ತಾ ಇದ್ದರು. ಈ ಪ್ರಕರಣ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.