ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಮಂಡ್ಯದಲ್ಲಿ ಮೂರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ..!

1 Min Read

ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಮಂಡ್ಯದಲ್ಲಿ ಮೂರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ..!

ಮಂಡ್ಯ: ಪ್ರೀತಿಸಿ ಮದುವೆಯಾಗಿದ್ದವರು.. ಮೂರು ಮಕ್ಕಳ ಸುಂದರ ಸಂಸಾರವದು.. ಚೆಂದವಾಗಿ ಬದುಕಬೇಕಿದ್ದ ಜೀವನ ಇಂದು ಮಕ್ಕಳೊಟ್ಟಿಗೆ ತಾಯಿ ಸ್ಮಶಾನದಲ್ಲಿ ಮಲಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗಂಡ ಬೇರೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಪತ್ನಿ ತನ್ನ ಮೂರು ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ.

ಉಸ್ನಾ ಕೌಸರ್ ಆತ್ಮಹತ್ಯೆಗೆ ಶರಣಾದ ಮಹಿಳೆ. ತನ್ನ 8 ವರ್ಷದ ಪುತ್ರ ಹ್ಯಾರಿಶ್, 4 ವರ್ಷದ ಆಲಿಸಾ ಮತ್ತು ಒಂದೂವರೆ ವರ್ಷದ ಆನಮ್ ಗೆ ವಿಷ ನೀಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯನ್ನು ಉಸ್ನಾ ಪೋಷಕರು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಅನೈತಿಕ ಸಂಬಂಧದ ವಿಚಾರವಾಗಿ ಅದಾಗಲೇ ಜಗಳವಾಗಿತ್ತು. ರಾಜಿ, ಪಂಚಾಯತಿಯನ್ನು ಮಾಡಲಾಗಿತ್ತು. ಬಳಿಕ ಆತ ಮಕ್ಕಳ ಮೇಲೆ ಹಾಗೂ ಕುರಾನ್ ಮೇಲೂ ಪ್ರಮಾಣ ಮಾಡಿದ್ದ. ನಾನು ಬಟ್ಟೆಯನ್ನು ತರುವುದಕ್ಕೆ ತುಮಕೂರಿಗೆ ಬಂದಿದೆ. ವಾಪಾಸ್ ಆಗುವಷ್ಟರಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ ಉಸ್ನಾ ತಾಯಿ.

ಇನ್ನು ಉಸ್ನಾ ಹಾಗೂ ಅಖಿಲ್ ಅಹ್ಮದ್ ಪ್ರೀತಿಸಿ ಮದುವೆಯಾಗಿದ್ದವರು. ಹತ್ತು ವರ್ಷದ ಹಿಂದೆ ಮಳವಳ್ಳಿಯ ಶಿವನ ಸಮುದ್ರಕ್ಕೆ ಹೋದಾಗ ಅಲ್ಲಿ ಉಸ್ನಾ ಅವರನ್ನು ನೋಡಿ, ತನ್ನ ಮೊಬೈಲ್ ನಂಬರ್ ಅನ್ನು ಚೀಟಿಯಲ್ಲಿ ಬರೆದು ಎಸೆದಿದ್ದನಂತೆ. ಅಲ್ಲಿಂದ ಪ್ರೀತಿ ಶುರುವಾಗಿ, ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದರಂತೆ. ಆದ್ರೆ ಇತ್ತಿಚೆಗೆ ಅಖಿಲ್ ಬೇರೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದು, ಆಕೆಯನ್ನು ಬಿಡುವುದಿಲ್ಲ ಎಂದೇ ಹಠ ಮಾಡಿದ್ದನಂತೆ. ಇದರಿಂದ ಬೇಸತ್ತು ಉಸ್ನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಕಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *