ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ, ಇಂದು ಬಿಜೆಪಿ ಪ್ರತಿಭಟನೆ ನಡೆಸಿದೆ. ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಆರಗ ಜ್ಞಾನೇಂದ್ರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಣ್ಣ್ ಬಗ್ಗೆಯೂ ಮಾತನಾಡಿದ್ದಾರೆ.
ಮಲೆನಾಡಿನ ಬಗ್ಗರ ಗೊತ್ತಿರದ ಆ ಕಡೆಯ ಮಿನಿಸ್ಟರ್ ಸಾಹೇಬ್ರು ಸುಟ್ಟು ಕರಕಲಾಗಿದ್ದಾರೆ. ನಮ್ಮ ಖರ್ಗೆಯವರನ್ನು ನೋಡಿದ್ರೆ ಗೊತ್ತಾಗುತ್ತದೆ. ಸ್ವಲ್ಪ ತಲೆ ಕೂದಲು ಮುಚ್ಚಿಕೊಂಡಿರುವುದೇ ಅವರಿಗೆ ನೆರಳಿನಂತೆ ತಿಳಿದಿರುತ್ತಾರೆ ನಮ್ಮ ದುರಾದೃಷ್ಟ ಎಂದರೆ ಮಿನಿಸ್ಟರ್ ಸಾಹೇಬ್ರು ಕೂಡ ಆ ಕಡೆಯವರು. ಅವರಿಗೆ ಮರ – ಗಿಎ, ನೆರಳು ಏನಂಥ ಗೊತ್ತಿಲ್ಲ. ಸುಟ್ಟು ಕರಕಲಾಗಿರುತ್ತಾರೆ.
ನಮ್ಮ ಖರ್ಗೆಯವರನ್ನೇ ನೋಡಿದ್ರೆ ಗೊತ್ತಾಗುತ್ತದೆ. ಮಲೆನಾಡಿನ ಬದುಕಿನ ಬಗ್ಗೆ ಗೊತ್ತಿಲ್ಲ ಎಂದು ಭಾಷಣದ ವೇಳೆ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಆಕ್ರೋಶಗೊಂಡಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಖರ್ಗೆಯವರ ಕುರಿತು ನೀಡಿರುವ ಹೇಳಿಕೆ ಇಡೀ ಮೂಲ ನಿವಾಸಿ ದಲಿತರಿಗೆ ಮಾಡಿದ ಅವಮಾನ. ಹೀಗಾಗಿ ಆರಗ ಜ್ಞಾನೇಂದ್ರ ಅವರು, ಮಲ್ಲಿಕಾರ್ಜುನ ಖರ್ಗೆ ಹಾಗೂ ದಲಿತರ ಕ್ಷಮೆ ಕೇಳಬೇಕು ಎಂದಿದ್ದಾರೆ.