ವಿಜಯಪುರ: ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರು ದಿನೇ ದಿನೇ ಹೆಚ್ಚಾಗುತ್ತಲೇ ಇದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿಯೇ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಆದ್ರೆ ಈ ರೂಲ್ಸ್ ಗಳು ಆಗಾಗ ಅಲ್ಲಲ್ಲಿ ಬ್ರೇಕ್ ಆಗ್ತಾನೆ ಇರುತ್ತೆ.
ಇದೀಗ ವಿಜಯಪುರ ಜಿಲ್ಲೆಯಲ್ಲೂ ಕೊರೊನಾ ರೂಲ್ಸ್ ಬ್ರೇಕ್ ಮಾಡಲಾಗಿದೆ. ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಜನ ಕೊರೊನಾ ನಿಯಮ ಮೀರಿ ಜಾತ್ರೆ ಮಾಡಿದ್ದಾರೆ. ಗುಂಪು ಗುಂಪಾಗಿ ಜನ ಸೇರಬಾರದು ಎಂಬ ಕಾರಣಕ್ಕೇನೆ ಸರ್ಕಾರ ರೂಲ್ಸ್ ಜಾರಿಗೆ ತಂದಿದೆ.
ಆದ್ರೆ ಗ್ರಾಮದಲ್ಲಿ ನಡೆದ ನೀಲಗಂಗಾಂಬಿಕ ದೇವಿಯ ಜಾತ್ರೆ ನಡೆದಿದೆ. ನೂರಾರು ಜನರು ಗುಂಪಾಗಿ ಸೇರಿ ತಾಯಿಯ ರಥ ಎಳೆದಿದ್ದಾರೆ. ಕೊರಿನಾ ಹೆಚ್ಚಳದ ಭಯದಿಂದ ಎಲ್ಲಾ ಜಾತ್ರೆಗಳನ್ನು ಜಿಲ್ಲಾಡಳಿತ ರದ್ದು ಮಾಡಿದೆ. ಈ ಮಧ್ಯೆ ಗ್ರಾಮಸ್ಥರು ಕೊರೊನಾ ನಿಯಮ ಮೀರಿ ಅದ್ದೂರಿಯಾಗಿ ಜಾತ್ರೆ ಮಾಡಿದ್ದಾರೆ.