ಮುಂಬೈ: ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಕೇಸ್ ಬಗ್ಗೆ ಮಾತನಾಡಿರುವ ಶಿವಸೇನಾ ಸಮ.ಸದ ಸಂಜಯ್ ರಾವತ್, ಅಫ್ತಾಬ್ ಮಾಡಿರುವ ಕ್ರೌರ್ಯ ಕಣ್ಣ ಮುಂದೆ ಇದೆ. ಅದಕ್ಕೆ ಸಾಕ್ಷಿಗಳು ನಮ್ಮ ಕಣ್ಣ ಮುಂದೆ ಇದೆ. ಕೆಲವೊಂದು ವಿಚಾರಗಳಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಕಳೆದ ಮೂರು ವರ್ಷದಿಂದ ಪ್ರೀತಿಯಲ್ಲಿ ಇದ್ದ ಶ್ರದ್ಧಾ ಹಾಗೂ ಅಫ್ತಾದ್ ಲೀವಿಂಗ್ ರಿಲೇಷನ್ ಶಿಪ್ ನಲ್ಲಿಯೂ ಇದ್ದರು. ಮದುವೆ ಎಂಬ ವಿಚಾರ ಬಂದಾಗ ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದಾನೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಂಜಯ್ ರಾವತ್, ಹುಡುಗಿಯರು ಹುಡುಗರನ್ನು ಆಯ್ಕೆ ಮಾಡಿಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಶ್ರದ್ಧಾ ವಾಕರ್ ಅಂತಹ ವಿದ್ಯಾವಂತ, ಪ್ರಗತಿಪರ ಹೆಣ್ಣು ಮಕ್ಕಳು ಸಂಬಂಧ ಬೆಳೆಸುವಾಗ ಎಚ್ಚರದಿಂದ ಇರಬೇಕಾಗುತ್ತದೆ.

ಶ್ರದ್ಧಾ ಅವರ ತಂದೆಗೆ ಈ ಸಂಬಂಧ ಇಷ್ಟವಿರಲಿಲ್ಲ. ಆದರೂ ಶ್ರದ್ಧಾ ಆ ಸಂಬಂಧದಲ್ಲಿ ಮುಂದುವರೆದಿದ್ದಾರೆ. ತಂದೆಯ ಮಾತನ್ನು ನಿರಾಕರಿಸಿದ್ದಾರೆ. ಹೆಣ್ಣು ಮಕ್ಕಳು ಹುಡುಗರ ಆಯ್ಕೆಯಲ್ಲಿ ಎಚ್ಚರದಿಂದ ಇರಬೇಕಾಗುತ್ತದೆ. ಅಫ್ತಾಬ್ ಗೆ ಕರುಣೆ ಇಲ್ಲ. ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ಎಲ್ಲಾ ಸಾಕ್ಷಿಗಳು ಕಣ್ಣ ಮುಂದೆ ಇದೆ. ಕೆಲವೊಂದು ಸಲ ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.


