ಭಾರತ್ ಜೋಡೋ ಯಾತ್ರೆಗೆ ಕೆಪಿಸಿಸಿ, ಸ್ಥಳೀಯ ಶಾಸಕರಿಗೆ ಟಾರ್ಗೆಟ್ ಒಂದನ್ನು ನೀಡಿದೆ. ಯಾತ್ರೆ ನಡೆಯುವ ಪ್ರದೇಶದಲ್ಲಿ ಆಯಾ ಸ್ಥಳಿಯ ಶಾಸಕರು ಜನರನ್ನು ಸೇರಿಸಬೇಕಾಗಿದೆ. ಶಾಸಕರಿಂದ 5 ಸಾವಿರ ಜನರನ್ನು ಸೇರಿಸುವ ಟಾರ್ಗೆಟ್ ನೀಡಲಾಗಿದೆ. ಅದರಂತೆ ಜಮೀರ್ ಅಹ್ಮದ್ ಗೆ ಸಹ ಪಾದಯಾತ್ರೆಗೆ 5 ಸಾವಿರ ಜನರನ್ನು ಸೇರಿಸುವ ಟಾರ್ಗೆಟ್ ನೀಡಲಾಗಿತ್ತು.
ಆದರೆ ಜಮೀರ್ ಅಹ್ಮದ್ ಖಾನ್ ಪಾದಯಾತ್ರೆ ಜಾಗಕ್ಕೆ ತನ್ನ ಬೆಂಬಲಿಗರೊಂದಿಗೆ ನಾಲ್ಕು ಕಾರುಗಳಲ್ಲಿ ಬಂದಿದ್ದಾರೆ. ಇದನ್ನು ಕಂಡ ಕಾರ್ಯಕರ್ತರು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಈ ವಿಚಾರವಾಗಿ ವೇಣುಗೋಪಾಲ್ ಸಿಟ್ಟು ಮಾಡಿಕೊಂಡಿದ್ದಾರೆ.
ಜಮೀರ್ ಅಹ್ಮದ್ ಖಾನ್ ಅವರನ್ನು ಕರೆದು ಎಷ್ಟು ಜನ ಕರೆಸಿದ್ದೀಯಾ ಅಂತ ಕೇಳಿದ್ದಾರೆ. ಬಂದಿರುವ ಮೂರು ಮತ್ತೊಂದು ಜನಕ್ಕೆ ಸಮಜಾಯಿಷಿ ಕೊಡಲು ಮುಂದಾಗಿದ್ದಾರೆ. ಇದಕ್ಕೆ ವೇಣುಗೋಪಾಲ್ ಸಿಟ್ಟಾಗಿ ಅಲ್ಲಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಜಮೀರ್ ಪಾದಯಾತ್ರೆಯಿಂದ ಅರ್ಧಕ್ಕೆ ಹೋಗಿದ್ದಾರೆ ಎನ್ನಲಾಗಿದೆ.