ನವದೆಹಲಿ: 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದೆ. ಈ ಬಾರಿಯೂ ಗೆಲುವು ಕಂಡು ಅಧಿಕಾರ ಮುಂದುವರೆಸುತ್ತೇವೆ ಎಂಬ ವಿಶ್ವಾಸದಿಂದ ಬಿಜೆಪಿ ಇದ್ದರೆ, ಜನ ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ ಜನ ನಮ್ಮ ಕೈ ಹಿಡಿಯಲಿದ್ದಾರೆ ಎಂದು ಕಾಂಗ್ರೆಸ್ ನಂಬಿದೆ. ಆದ್ರೆ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಏಕಾಂಗಿಯಾಗಿ ಹೋರಾಟ ಕಷ್ಟ ಎಂದಿದ್ದಾರೆ.
2024ರ ಲೋಕಸಭಾ ಚುನಾವಣೆಯನ್ನು ಟಾರ್ಗೆಟ್ ಮಾಡಿರುವ ಕೆಸಿ ವೇಣುಗೋಪಾಲ್, ಚುನಾವಣೆಯಲ್ಲಿ ಪ್ರಧಾನಿ ಮೋದಿ ಸರ್ಕಾರವನ್ನು ಏಕಾಂಗಿಯಾಗಿ ಹೋರಾಡಿ ಗೆಲ್ಲುವುದು ಸುಲಭವಲ್ಲ. ಮತ ವಿಭಜನೆ ತಡೆಯಲು ವಿಪಕ್ಷಗಳು ಒಟ್ಟಾಗುವುದು ಅನಿವಾರ್ಯ ಎಂದಿದ್ದಾರೆ. ಕಾಂಗ್ರೆಸ್ ಎಲ್ಲಾ ಹಂತಗಳಲ್ಲಿ ಹೋರಾಡುತ್ತದೆ. ಆದರೆ ಪ್ರಜಾಪ್ರಭುತ್ವ ವಿರೋಧಿ, ಅರ್ವಾಧಿಕಾರಿಗಳ ವಿರೋಧ ಹೋರಾಡಬೇಕಾದರೆ ಎಲ್ಲಾ ಸರ್ವಪಕ್ಷಗಳ ಅಗತ್ಯವೂ ಬೇಕಾಗಿದೆ ಎಂದಿದ್ದಾರೆ.
ಸರ್ವಾಧಿಕಾರಿ ಸರ್ಕಾರದ ವಿರುದ್ಧ ಹೋರಾಡುವ ದೊಡ್ಡ ನಿರ್ಧಾರವನ್ನು ಕಾಂಗ್ರೆಸ್ ತೀರ್ಮಾನ ತೆಗೆದುಕೊಂಡಿದೆ. ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ನಾಯಕರಲ್ಲಿ ಹೊಸ ಚೈತನ್ಯ ತುಂಬಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಯಂತ ಸನ್ನಿವೇಶ ನಿರ್ಮಾಣವಾಗಿದೆ. ಬಿಜೆಪಿಯನ್ನು ಹೊರದಬ್ಬುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.