ಗೃಹ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮೇಲೆ ನೀಡುವ 200 ರೂಪಾಯಿ ಸಬ್ಸಿಡಿ ಹಣವನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. 2023-24ನೇ ಸಾಲಿಗೂ ಈ ಯೋಜನೆಯನ್ನು ವಿಸ್ತರಣೆ ಮಾಡಿದೆ. ಆದ್ರೆ ಕಳೆದ ಕೆಲವು ತಿಂಗಳಿನಿಂದ ಸಬ್ಸಿಡಿ ನಿಂತು ಹೋಗಿತ್ತು. ಈಗ ಮತ್ತೆ ಸಬ್ಸಿಡಿ ನೀಡುವ ಬಗ್ಗೆ ಆದೇಶ ಹೊರಡಿಸಿದೆ.
ಉಜ್ವಲ ಯೋಜನೆಯಡಿ 200 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ. ವರ್ಷಕ್ಕೆ 12 ಸಿಲಿಂಡರ್ ಬುಕ್ ಮಾಡಬೇಕಾಗುತ್ತದೆ. ಆ ಪ್ರಕಾರ ಪ್ರತಿ ಸಿಲಿಂಡರ್ ಮೇಲೆ 200 ರೂಪಾಯಿ ಸಬ್ಸಿಡಿ ಸಿಗಲಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಕಳೆದ ಬಾರಿಗಿಂತ ಈ ಬಾರಿಗೆ ಒಂದು ಕೋಟಿ ಹೆಚ್ಚು ಹಣವನ್ನು ಕೇಂದ್ರ ಸರ್ಕಾರ ವ್ಯಯಿಸಲಿದೆ. ಅಂದ್ರೆ 2022-23ರ ಸಾಲಿನಲ್ಲಿ ಸುಮಾರು 6,100 ಕೋಟಿ ಹಣ ವ್ಯಯಿಸಿತ್ತು. ಈ ಬಾರಿ ಸುಮಾರು 7,680 ಕೋಟಿಯಷ್ಟು ಹಣ ವ್ಯಯಿಸುತ್ತಿದೆ.
ಹಲವು ಕಾರಣದಿಂದ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ಆದರೆ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಹಾಯದ ಅಗತ್ಯವಿದ್ದು, ಅದಕ್ಕಾಗಿಯೇ ಸಹಾಯಧನ ಮಂಜೂರು ಮಾಡಲಾಗಿದೆ. ಇದರಿಂದ ಬಡ ಕುಟುಂಬಗಳಿಗೆ ಹಣದ ಸಹಾಯ ಸಿಕ್ಕಂತಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.