ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಹುದ್ದೆ ಬಗ್ಗೆ ಈಗಲೂ ಆಗಾಗ ಹೊಗೆಯಾಡುತ್ತಲೇ ಇರುತ್ತದೆ. ಯಾಕಂದ್ರೆ ಸಿಎಂ ಹುದ್ದೆ ಬೇಕು ಎಂಬ ಕಾರಣಕ್ಕೆ ಡಿಕೆ ಶಿವಕುಮಾರ್ ಕೂಡ ಸಾಕಷ್ಟು ಶ್ರಮ ಹಾಕಿದರು. ಆದರೆ ಸದ್ಯದ ಪರಿಸ್ಥಿತಿಗೆ ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಿದೆ ಹೈಕಮಾಂಡ್. ಇದರ ಜೊತೆಗೆ ಇದೇ ಅವಧಿಯಲ್ಲಿ ಡಿಕೆ ಶಿವಕುಮಾರ್ ಕೂಡ ಸಿಎಂ ಆಗಲಿದ್ದಾರೆ ಎಂಬ ಭರವಸೆಯನ್ನು ನೀಡಿದೆ.
ಇದರ ನಡುವೆ ಸಚಿವ ಎಂಬಿ ಪಾಟೀಲ್ ಹೇಳಿದ ಹೇಳಿಕೆ ಡಿಕೆಶಿ ಬೆಂಬಲಿಗರನ್ನು ಕೆರಳಿಸಿದೆ. ಪೂರ್ಣಾವಧಿಯಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯಲಿದ್ದಾರೆ ಎಂದಿದ್ದರು. ಆ ಹೇಳಿಕೆಯನ್ನು ಬಳಿಕ ಸಮರ್ಥನೆ ಕೂಡ ಮಾಡಿಕೊಂಡಿದ್ದರು. ಆದರೆ ಮಾಧ್ಯಮದ ಮೂಲಕ ಡಿಕೆ ಸುರೇಶ್ ಎಚ್ಚರಿಕೆ ನೀಡಿದ್ದರು. ಇದೀಗ ಎದುರಿಗೆ ಸಿಕ್ಕ ಎಂಬಿ ಪಾಟೀಲ್ ಅವರಿಗೆ ಮತ್ತೆ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧ ಸಭಾಂಗಣದಲ್ಲಿ ಡಿಕೆ ಸುರೇಶ್ ಹಾಗೂ ಎಂಬಿ ಪಾಟೀಲ್ ಮುಖಾಮುಖಿಯಾದರು. ಈ ವೇಳೆ ಗುರಾಯಿಸಿದ ಡಿಕೆ ಸುರೇಶ್, ಬಿಗಿಯಾಗಿರಲಿ ಸ್ವಲ್ಪ ಎಂದಿದ್ದಾರೆ. ಬಹಿರಂಗವಾಗಿಯೇ ಹೇಳಿದು, ಇದನ್ನು ಕಂಡು ಅಲ್ಲಿದ್ದ ಎಲ್ಲರೂ ಗಾಬರಿಯಾಗಿದ್ದಾರೆ.