ಬೆಂಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ದೇವೇಗೌಡ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಗುಣಮುಖರಾಗಿ ಮನೆಗೆ ವಾಪಾಸ್ಸಾಗಿದ್ದಾರೆ.
ಮೊಣಕಾಲು ಸಮಸ್ಯೆಯಿಂದ ದೇವೇಗೌಡ ಅವರು ಬಳಲುತ್ತಿದ್ದರು. ಕಾಲು ಊತ ಕೂಡ ಜಾಸ್ತಿಯಾಗಿತ್ತು. ಈ ವೇಳೆ ನಾರ್ಮಲ್ ಚೆಕಪ್ ಗೆಂದು ಹೋಗಿದ್ದರು. ಮೊಣಕಾಲು ನೋವಿಗೆ ಚಿಕಿತ್ಸೆ ನೀಡಿದ್ದು, ಕಳೆದ ಐದು ದಿನಗಳಿಂದ ಆಸ್ಪತ್ರೆಯಲ್ಲಿಯೆ ಚಿಕಿತ್ಸೆ ಪಡೆದಿದ್ದಾರೆ. ಇಂದು ಮನೆಗೆ ತೆರಳಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ದೇವೇಗೌಡ ಅವರು ಕೂಡ ಶ್ರಮವಹಿಸುತ್ತಾ ಇದ್ದಾರೆ. ಸದ್ಯ ಅವರ ಸ್ಥಿತಿ ಆರೋಗ್ಯವಾಗಿದ್ದು, ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿದೆ.