ಬೆಂಗಳೂರು: ಕಾಂಗ್ರೆಸ್ ನಾಯಕರಿಗೆ ಸದ್ಯ ಸಿಟಿ ರವಿ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದೇ ಅಸ್ತ್ರವಾಗಿ ಬಿಟ್ಟಿದೆ. ಚುನಾವಣೆಯ ಹತ್ತಿರವಾಗುತ್ತಿರುವ ಹೊತ್ತಲ್ಲಿ ವಿಪಕ್ಷ ನಾಯಕರಿಗೆ ಸಿಟಿ ರವಿ ಆಹಾರವಾಗಿದ್ದಾರೆ. ಇಂದು ಕಾಂಗ್ರೆಸ್ ಹಲವು ಕಾರ್ಯಕರ್ತರು ಸಿಟಿ ರವಿ ಅವರ ಕೊರಳಿಗೆ ನಲ್ಲಿ ಮೂಳೆ ನೇತಾಕಿದ್ದಂತ ಅಣಕು ಪ್ರದರ್ಶನ ಮಾಡಿದ್ದಾರೆ.
ಜೊತೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರಿಗೆ ನಲ್ಲಿ ಮೂಳೆ ಹಾಗೂ ಬಿರಿಯಾನಿಯನ್ನು ಪಾರ್ಸೆಲ್ ಕಳುಹಿಸಿರುವ ಯೂತ್ ಕಾಂಗ್ರೆಸ್ ಪಡೆ, ಸಿಟಿ ರವಿ ಅವರು ನಾನ್ ವೆಜ್ ತಿನ್ನುವ ರೀತಿಯನ್ನು ಅಣುಕು ಪ್ರದರ್ಶನ ಮಾಡಿದ್ದಾರೆ. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಸಿಟಿ ರವಿಗೆ ಮುಜರಾಯಿ ಇಲಾಖೆ ನಿರ್ಬಂಧ ಹೇರಬೇಕೆಂದು ಯೂತ್ ಕಾಂಗ್ರೆಸ್ ಒತ್ತಡ ಹೇರಿದೆ.
ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮಾಂದಾಹಾರ ಸೇವಿಸಿ ಧರ್ಮಸ್ಥಳಕ್ಕೆ ಹೋಗಿದ್ದರೆಂದು ದೊಡ್ಡಮಟ್ಟದ ವಿವಾದ ಸೃಷ್ಟಿಯಾಗಿತ್ತು. ಈ ವಿಚಾರವನ್ನು ಅಂದು ಕಟುವಾಗಿ ಟೀಕಿಸಿದ್ದ ಸಿಟಿ ರವಿ ಅವರು ಮಾಂಸಾಹಾರ ಸೇವಿಸಿ ನಾಗಬನಕ್ಕೆ ಹೋಗಿದ್ದನ್ನು ಯೂತ್ ಕಾಂಗ್ರೆಸ್ ಟೀಕಿಸುತ್ತಿದೆ.