ಕನ್ನಡ ಚಿತ್ರರಂಗದ ಎಸ್ ಕೆ ಭಗವಾನ್ ಇಂದು ಬೆಳಗ್ಗೆ ಜಯದೇವ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈಗಾಗಲೇ ಸಹಕಾರಿ ನಗರದ ಅವರ ನಿವಾಸಕ್ಕೆ ಪಾರ್ಥೀವ ಶರೀರವನ್ನು ತರಲಾಗಿದೆ. ಮಧ್ಯಾಹ್ನ 12.30ಕ್ಕೆ ಅಭಿಮಾನಿಗಳಿಗಾಗಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ವ್ಯವಸ್ಥೆಗೆ ಏರ್ಪಾಡು ಮಾಡಲಾಗಿದೆ.
ಭಗವಾನ್ ಅವರು ಮೈಸೂರಿನಲ್ಲಿ 1933ರಲ್ಲಿ ಜನಿಸಿದ್ದರು. ರಂಗಭೂಮಿ ಹಿನ್ನೆಲೆಯವರಾಗಿದ್ದ ಕಾರಣ ಕಾಲೇಜು ದಿನಗಳಲ್ಲಿಯೇ ರಂಗಭೂಮಿ ಚಟುವಟಿಕೆಯಲ್ಲಿ ಹೆಚ್ಚು ಕಾರ್ಯ ಪ್ರವೃತ್ತರಾಗಿದ್ದರು. 1956ರಲ್ಲಿ ಚಿತ್ರರಂಗಕ್ಕೆ ಸಹಾಯಕ ನಿರ್ದೇಶಕರಾಗಿ ಎಂಟ್ರಿಕೊಟ್ಟಿದ್ದರು. ಚಿತ್ರರಂಗದಲ್ಲಿ ದೊರೈ – ಭಗವಾನ್ ಎಂದೇ ಖ್ಯಾತಿಯಾಗಿದ್ದರು. ಆದ್ರೆ ದೊರೈ ರಾಜ್ ನಿಧನರಾದ ಬಳಿಕ ಭಗವಾನ್ ಒಂಟಿಯಾದರು.
ಈ ಜೋಡಿ ಸುಮಾರು 49 ಸಿನಿಮಾಗಳನ್ನು ನಿರ್ದೇಶನ ಮಾಡಿತ್ತು. 24 ಕಾದಂಬರಿಗಳ ಆಧಾರದ ಮೇಲೆ ಸಿನಿಮಾ ಮಾಡಲಾಗಿತ್ತು. ಈಗ ಎರಡು ಕೊಂಡಿಗಳು ಕಳಚಿದೆ. ಚಿತ್ರರಂಗದ ನೋವಿನಲ್ಲಿದೆ. ಎಲ್ಲರೂ ಎಸ್ ಕೆ ಭಗವಾನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.