ಬೆಂಗಳೂರು: ನಟ ಕಿಚ್ಚ ಸುದೀಪ್ ಅವರಿಗೆ ಇತ್ತಿಚೆಗೆ ಬೆದರಿಕೆಯ ಪತ್ರವೊಂದು ಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಇದೀಗ ಅದಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಒಂದು ಸಿಕ್ಕಿದೆ. ಪತ್ರ ಬರೆದವನು ಸಣ್ಣ ಸುಳಿವು ಸಿಕ್ಕಿದೆ.
ಪುಟ್ಟೇನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡು ಗಂಭೀರವಾಗಿ ವಿಚಾರಣೆ ನಡೆಸುತ್ತಿದ್ದರು. ಇದೀಗ ಅದಕ್ಕೆ ಸಂಬಂಧಿಸಿದಂತೆ ಬಳಕೆ ಮಾಡಿದ್ದ ಕಾರಿನ ಸುಳಿವು ಸಿಕ್ಕಿದೆ. ಬೆದರಿಕೆ ಹಾಕಲು ಕಾರು ಬಳಕೆ ಮಾಡಲಾಗಿದೆ.
ದೊಮ್ಮಲೂರಿನ ಪೋಸ್ಟ್ ಆಫೀಸಲ್ಲಿ ಸುದೀಪ್ ಅವರಿಗೆ ಪತ್ರ ಹಾಕಲಾಗಿದೆ. ಬೆದರಿಕೆ ಪತ್ರ ಹಾಕಲು ಸ್ವಿಫ್ಟ್ ಕಾರು ಬಳಕೆ ಮಾಡಲಾಗಿದೆ. ಪೋಸ್ಟ್ ಬಾಕ್ಸ್ ಬಳಿಯಿದ್ದ ಸಿಸಿಟಿವಿಯಲ್ಲಿ ಎಲ್ಲವೂ ಕವರ್ ಆಗಿದೆ. ತನಿಖೆ ನಡೆಸುವಾಗ ಈ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಸಿಕ್ಕ ದೃಶ್ಯಾವಳಿಯ ಪ್ರಕಾರ ಕೆಂಗೇರಿ ಭಾಗದ ವ್ಯಕ್ತಿ ಎಂದು ಗೊತ್ತಾಗಿದೆ.





GIPHY App Key not set. Please check settings