ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಬಿಜೆಪಿ ಸುದ್ದಿಗೋಷ್ಟಿ ನಡೆಸಿದೆ. ಈ ಸುದ್ದಿಗೋಷ್ಠಿಗೆ ಕಿಚ್ಚ ಸುದೀಪ್ ಗೆ ಕೂಡ ಆಹ್ವಾನ ನೀಡಲಾಗಿತ್ತು. ಸುದೀಪ್ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆಗೆ ಸುದ್ದಿಗೋಷ್ಟಿಯಲ್ಲಿ ಕ್ಲಾರಿಟಿ ಸಿಕ್ಕಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ನಾನು ಬೆಂಬಲ ಸೂಚಿಸುತ್ತೇನೆ ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ.
ಕಿಚ್ಚ ಸುದೀಪ್ ಫ್ಯಾಮಿಲಿ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬಹಳ ಆತ್ಮೀಯರು. ಸುದೀಪ್, ಬೊಮ್ಮಾಯಿ ಅವರನ್ನು ಮಾಮಾ ಎಂದೇ ಕರೆಯುತ್ತಾರೆ. ಇನ್ನು ಬೊಮ್ಮಾಯಿ ಅವರು ದೀಪು ಎಂದೇ ಕರೆಯುತ್ತಾರೆ. ಅವರಿಬ್ಬರ ನಡುವಿನ ಬಾಂಧವ್ಯ ಎಂತದ್ದು ಎಂದು ಈಗಾಗಲೇ ಕಾರ್ಯಕ್ರಮಗಳಲ್ಲಿ ಎಲ್ಲರೂ ಕಂಡಿದ್ದಾರೆ.





GIPHY App Key not set. Please check settings