ಬೆಂಗಳೂರು: ನಟಿ ರಮ್ಯಾ ಅವರು ನಿನ್ನೆಯಷ್ಟೇ ಮನವಿ ಮಾಡಿಕೊಂಡಿದ್ದರು. ನಾಯಿ ಕಳೆದೋಗಿದೆ, ಹುಡುಕಿ ಕೊಡಿ ಎಂದು. ಆದರೆ ಇಂದು ಚಂಪಾ ಸಾವನ್ನಪ್ಪಿದೆ. ಈ ಬಗ್ಗೆ ನಟಿ ರಮ್ಯಾ ಅವರೇ ಮಾಹಿತಿ ನೀಡಿದ್ದಾರೆ. ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಮೇ 6ರಂದು ಚಂಪಾ ಎಂಬ ಶ್ವಾನ ರೇಸ್ ಕೋರ್ಸ್ ರೋಡ್ ನಿಂದ ಕಾಣೆಯಾಗಿತ್ತು. ಕಪ್ಪು ಬಣ್ಣದ ಶ್ವಾನ ಇದಾಗಿತ್ತು. ಆದರೆ ಅದಕ್ಕೆ ಕಣ್ಣು ಕಾಣಿಸುತ್ತಿರಲಿಲ್ಲ. ಹುಡುಕಿ ಕೊಡಿ ಎಂದು ರಮ್ಯಾ ಅವರು ಮನವಿ ಮಾಡಿದ್ದರು. ಆದರೆ ಶ್ವಾನ ಇಂದು ಸಾವನ್ನಪ್ಪಿರುವ ಕಾರಣ ರಮ್ಯಾ ದುಃಖದಲ್ಲಿದ್ದಾರೆ.
ಟ್ವಿಟ್ಟರ್ ನಲ್ಲಿ ರಮ್ಯಾ ಈ ಬಗ್ಗೆ ಪೋಸ್ಟ್ ಹಾಕುತ್ತಿದ್ದಂತೆ ಅಭಿಮಾನಿಗಳೆಲ್ಲಾ ಸಾಂತ್ವಾನ ಹೇಳಿದ್ದಾರೆ. ಸಮಾಧಾನ ಮಾಡಿಕೊಳ್ಳುವಂತೆ ಹೇಳುತ್ತಿದ್ದಾರೆ.





GIPHY App Key not set. Please check settings