
ಬೆಂಗಳೂರು: ಡ್ರಗ್ ಕೇಸ್ ಆದ ಮೇಲೆ ಮದುವೆ, ಮಗು, ಮನೆ, ಸಂಸಾರ ಅಂತ ಸಿಕ್ಕಾಪಟ್ಟೆ ಬ್ಯುಸಿ ಇರುವ ಕಾರಣ, ಸಿನಿಮಾ ಇಂಡಸ್ಟ್ರಿಯಿಂದ ದೂರವೇ ಉಳಿದಿದ್ದಾರೆ. ಆಗಾಗ ಸಮಾಜಸೇವೆ, ಬಡವರ ಸೇವೆ ಅಂತ ಸುದ್ದಿಯಲ್ಲಿರ್ತಾ ಇದ್ದಂತ ಸಂಜನಾ ಇದೀಗ ವಾಸವಿರುವ ಏರಿಯಾದಲ್ಲಿ ಕಾರು ನಿಲ್ಲಿಸುವ ವಿಚಾರಕ್ಕೆ ತಗಾದೆ ತೆಗೆದಿದ್ದಾರೆ.

ನಟಿ ಸಂಜನಾ ಗಲ್ರಾನಿ ಇಂದಿರಾನಗರದ ಧೂಪನಹಳ್ಳಿಯಲ್ಲಿ ವಾಸವಿದ್ದಾರೆ. ಅದೇ ಏರಿಯಾದಲ್ಲಿ ಸುಮಾರು 30-40 ವರ್ಷದಿಂದ ಯಶೋಧಮ್ಮ ಮತ್ತು ರಾಜಣ್ಣ ಎಂಬುವವರು ವಾಸವಿದ್ದಾರೆ. ಅವರು ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಜಗಳವಾಡಿದ್ದಾರೆ.
ಈ ಸಂಬಂಧ ಕೋರ್ಟ್ ಅನುಮತಿ ಪಡೆದು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದಾರೆ. ದೂರಿನ ಪ್ರಕಾರ, “ನಾವೂ 40 ವರ್ಷಗಳಿಂದ ಇಲ್ಲಿಯೇ ಇರೋದು. ತಕರಾರು ತೆಗೆದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ” ಎಂದು ಸಂಜನಾ ಗಲ್ರಾನಿ ದೂರಿನಲ್ಲಿ ದಾಖಲಿಸಿದ್ದಾರೆ.
GIPHY App Key not set. Please check settings