ಪುಷ್ಪ1 ಸಿನಿಮಾದ ಗುಂಗಿನಿಂದ ಜನ ಇನ್ನು ಹೊರಗೆ ಬಂದಿಲ್ಲ. ಪುಷ್ಪ2 ಬಗ್ಗೆ ಕ್ರೇಜ್ ಜೋರಾಗಿದೆ. ಇತ್ತಿಚೆಗೆ ಚಿತ್ರದ ಝಲಕ್ ಬಿಟ್ಟು ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದ್ದಾರೆ. ಆದ್ರೆ ಇದೀಗ ಚಿತ್ರದ ಶೂಟಿಂಗ್ ಇದ್ದಕ್ಕಿದ್ದ ಹಾಗೇ ಸ್ಟಾಪ್ ಆಗಿದೆ. ಚಿತ್ರೀಕರಣಕ್ಕೆ ಟೀಂ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ.
ಐಟಿ ಅಧಿಕಾರಿಗಳು ಸುಕುಮಾರ್ ಮತ್ತು ಮೈತ್ರಿ ಮೂವಿ ಮೇಕರ್ಸ್ ಮೇಲೆ ದಾಳಿ ನಡೆಸಿದ್ದರು. ಜಿಎಸ್ಟಿಯಲ್ಲಿ ಮೋಸ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ದಾಳಿ ನಡೆಸಿ, ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕ್ರಿಯೆ ಪೂರ್ಣ ಆಗುವ ತನಕ ಯಾವುದೇ ವ್ಯವಹಾರ ಮಾಡಲು ಮೂವಿ ಮೇಕರ್ಸ್ ಗೆ ಸಾಧ್ಯವಿಲ್ಲ. ಹೀಗಾಗಿ ಶೂಟಿಂಗ್ ಗೆ ಬ್ರೇಕ್ ಹಾಕಲಾಗಿದೆ.
ಪುಷ್ಪ2 ಸಿನಿಮಾದ ಎರಡು ಶೆಡ್ಯೂಲ್ ಈಗಾಗಲೇ ಮುಗಿದಿದ್ದು, ಮೂರನೇ ಶೆಡ್ಯೂಲ್ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಐಟಿ ದಾಳಿ ನಡೆದ ಹಿನ್ನೆಲೆ ಶೂಟಿಂಗ್ ಗೆ ಬ್ರೇಕ್ ಬಿದ್ದಿದೆ. ತೆಲುಗಿನಲ್ಲಿ ಮೈತ್ರಿ ಮೂವಿ ಮೇಕರ್ಸ್ ಅಂದ್ರೆ ಅತಿ ದೊಡ್ಡ ಸಂಸ್ಥೆ ಇದಾಗಿದೆ. ಈ ಬ್ಯಾನರ್ ನಡಿ ದೊಡ್ಡ ದೊಡ್ಡ ಸಿನಿಮಾಗಳನ್ನೆ ನಿರ್ಮಾಣ ಮಾಡಲಾಗಿದೆ.





GIPHY App Key not set. Please check settings