ಮಂಡ್ಯ: ಇತ್ತಿಚೆಗಷ್ಟೇ ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದೆ. ಇದು ಮಂಡ್ಯ ಜಿಲ್ಲೆಯಲ್ಲಿಯೇ ಹಲವರಿಗೆ ಬೇಸರದ ಸಂಗತಿಯಾಗಿದೆ. ಅವರ ಗೆಲುವಿಗೆ ಸಪೋರ್ಟ್ ಮಾಡಿದ್ದವರೆಲ್ಲಾ ಈಗ ಹಿಂದೆ ಸರಿಯುವಂತೆ ಆಗಿದೆ. ಸ್ವಾಭಿಮಾನ ಪದ ಬಳಸಬೇಡಿ ಎಂದು ಸುಮಲತಾ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರವೀಂದ್ರ ತರಾಟೆ ತೆಗೆದುಕೊಂಡಿದ್ದಾರೆ.
ಕತ್ತು ಹಿಸುಕಿದ್ದೀರಿ. ನೀವೂ ಯಾವ ರೀತಿಯಾಗಿ ಕೊಲೆಗಡುಕರಾಗಿದ್ದೀರಿ. ಬೆನ್ನಿಗೆ ಚೂರಿ ಹಾಕೋರು ನೀವೂ ಇನ್ನು ಮುಂದೆ ಸ್ವಾಭಿಮಾನಿ ಪದ ಬಳಸಬೇಡಿ. ಜಿಲ್ಲೆಯ ಸ್ವಾಭಿಮಾನ ಅಡವಿಡಲು ಹೋಗಬೇಡಿ. ಆ ಪದ ಹೇಳುವ ಹಕ್ಕು ನಿಮಗೆ ಇಲ್ಲ. ಸಚ್ಚಿದಾನಂದನ ಬಿಟ್ಟುಕೊಡಲು ನಿಮಗೆ ಆಗಲ್ಲ. ರಮೇಶ್ ಬಾಬು, ಬಂಡಿಸಿದ್ದೇಗೌಡರ ಬೆಂಬಲವಾಗಿ ನಿಂತ ರೈತ ಸಂಘಕ್ಕೆ ಏನು ನ್ಯಾಯ ಕೊಡುತ್ತೀರಾ..? ಎಂದು ಪ್ರಶ್ನಿಸಿದ್ದಾರೆ.
ನಮ್ಮಣ್ಣನ (ಅಂಬರೀಶ್) ಮರ್ಯಾದೆ ಕಳೆಯಲು ಹೋಗಬೇಡಿ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಡದೆ ಹೋದರೆ ಇನ್ನು ಹತ್ತು ಹತ್ತು ಹಲವು ವಿಚಾರಗಳು ಹೊರಗೆ ಬರುತ್ತವೆ. ಸುಮಲತಾರಿಗಾಗಿ, ಜಿಲ್ಲೆ ಅಸ್ಮಿತೆ ಸ್ವಾಭಿಮಾನಕ್ಕಾಗಿ ಪಾದಯಾತ್ರೆ ಮಾಡಿದ್ದೆವು. ನನ್ನಂತವರ ಹೋರಾಟದಿಂದ ಎಲೆಕ್ಷನ್ ಗೆದ್ರಿ. ಅದಾದ ಬಳಿಕ ನೀವೂ ಎಲ್ಲಿಗೆ ಹೋದ್ರಿ..? ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡಲು ಪ್ರಯತ್ನ ಪಟ್ಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.





GIPHY App Key not set. Please check settings