
ಭೋಪಾಲ್ : ಕಳೆದ ವರ್ಷ ಅಂದ್ರೆ ಪ್ರಧಾನಿಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ದೇಶಕ್ಕೆ ನಮೀಯಾದಿಂದ ವಿಶೇಷ ಚೀತಾಗಳನ್ನು ತರಿಸಲಾಗಿತ್ತು. ಆದರೆ ಆ ಎಂಟು ಚೀತಾದಲ್ಲಿ ಒಂದು ಚೀತಾಗೆ ಕಿಡ್ನಿ ಸಮಸ್ಯೆ ಉಂಟಾಗಿದೆ. ಅನಾರೋಗ್ಯದಿಂದ ಬಳಲುತ್ತಿದೆ.

ಮಧ್ಯಪ್ರದೇಶದ ಕುನೋ ಅರಣ್ಯದಲ್ಲಿ ಈ ಚೀತಾಗಳನ್ನು ಬಿಡಲಾಗಿದೆ. ಅದರಲ್ಲಿ ಸಶಾ ಎಂಬ ಹೆಸರಿನ ಚೀತಾಗೆ ಸೋಂಕು ಕಾಣಿಸಿಕೊಂಡಿದೆ. ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದೆ. ಅಸ್ವಸ್ಥಗೊಂಡಿದೆ. ಈ ಬಾರಿಯ ಣ್ಣು ಚೀತಾ ಸೋಮವಾರದಿಂದ ಅಸ್ವಸ್ಥಗೊಂಡ ರೀತಿಯಲ್ಲಿ ಇತ್ತು. ತಕ್ಷಣ ಅದನ್ನು ವೈದ್ಯರು ಪರೀಕ್ಷಿಸಿದ್ದಾರೆ.
ಚೀತಾವನ್ನು ಕ್ವಾರಂಟೈನ್ ಕೂಡ ಮಾಡಲಾಗಿತ್ತು. ಬಳಿಕ ತಪಾಸಣೆ ಮಾಡಿದಾಗ ಕಿಡ್ನಿ ಸಮಸ್ಯೆ ಇರುವುದು ಬೆಳಕಿಗೆ ಬಂದಿದೆ. ಡಾ. ಅತುಲ್ ಗುಪ್ತಾ ನೇತೃತ್ವದಲ್ಲಿ ವೈದ್ಯರ ತಂಡ ಚೀತಾ ಮೇಲೆ ನಿಗಾ ಇರಿಸಿದೆ. ಸಶಾ ಬಿಟ್ಟರೆ ಉಳಿದೆಲ್ಲಾ ಚೀತಾಗಳು ಆರೋಗ್ಯವಾಗಿವೆ. ಈ ಚೀತಾಗಳ ಚಿಕಿತ್ಸಗಾಗಿ ನಮಿಬೀಯಾ ಮತ್ತು ಆಫ್ರಿಕಾದ ವೈದ್ಯರನ್ನು ಸಂಪರ್ಕ ಮಾಡಲಾಗಿದೆ.
GIPHY App Key not set. Please check settings