
ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಉತ್ತರ ಪ್ರದೇಶದ ಲಖನೌ ಪೊಲೀಸರು ಎಫ್ಐಆರ್ ಹಾಕಿದ್ದಾರೆ. ಭಾರತೀಯ ದಂಡ ಸಂಹಿತೆ 409ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

ಮುಂಬೈ ನಿವಾಸಿ ಜಶ್ವಂತ್ ಶಾ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಎಫ್ಐಆರ್ ದಾಖಲಾಗಿದೆ. ಗೌರಿಖಾನ್ ಅವರ ಸ್ಪೂರ್ತಿಯಿಂದಾಗಿ ಮೋಸ ಹೋದೆ ಎಂದು ಜಶ್ವಂತ್ ದೂರು ನೀಡಿದ್ದಾರೆ.
ತುಳ್ಸಿಯಾನಿ ಕನ್ಸ್ಟ್ರಕ್ಷನ್ ಅಂಡ್ ಡೆವಲಪ್ಮೆಂಟ್ ಲಿಮಿಟೆಡ್ ಕಂಪನಿಗೆ ಗೌರಿ ಖಾನ್ ಅಂಬಾಸಿಡರ್ ಆಗಿದ್ದಾರೆ. ಈ ಕಂಪನಿಯ ಫ್ಲ್ಯಾಟ್ ಖರೀದಿ ಮಾಡಲು ಜಶ್ವಂತ್ ಮುಂದಾಗಿದ್ದರಂತೆ. ಗಾಲ್ಫ್ ಸಿಟಿಯಲ್ಲಿ ಫ್ಲಾಟ್ ಖರೀದಿ ಮಾಡುವುದಕ್ಕೆ ಸುಮಾರು 86 ಲಕ್ಷ ರೂಪಾಯಿ ನೀಡಿದ್ದರಂತೆ. ಆದರೂ ಫ್ಲಾಟ್ ಖರೀದಿ ಮಾಡಲು ಆಗಿಲ್ಲವಂತೆ. ಗೌರಿಖಾನ್ ಸ್ಪೂರ್ತಿಯಿಂದ ಖರೀದಿ ಮಾಡಲು ಹೋಗಿದ್ದೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

GIPHY App Key not set. Please check settings