
ಬೆಂಗಳೂರು: ಹಣಕ್ಕಾಗಿ ಕಳ್ಳತನ ಮಾಡಿ, ನಕಲಿ ದಾಖಲೆಗಳನ್ನು ಮಾಡಿ ಮಾರಾಟ ಮಾಡುತ್ತಾರೆ. ಆದ್ರೆ ಇಲ್ಲೊಬ್ಬ ಜೆಡಿಎಸ್ ಪಕ್ಷದ ಮುಖಂಡನೇ ಜೆಡಿಎಸ್ ಎಂಎಲ್ಸಿ ನಾಯಕನ ಕಾರನ್ನೇ ಕದ್ದಿರುವ ಘಟನೆ ನಡೆದಿದೆ. ತಾನು ಕದ್ದ ಕಾರಿಗೆ ಜೆಡಿಎಸ್ ಎಂಎಲ್ಸಿ ಕಾರಿನ ನಂಬರ್ ಪ್ಲೇಟ್ ಹಾಕಿ ಮಾರಾಟ ಮಾಡಲು ಯತ್ನಿಸಿದ್ದಾನೆ. ಈಗ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ.

ಕಾರು ಮಾರಾಟಕ್ಕೆ ಯತ್ನಿಸಿದ್ದಾಗ ಹೈಗ್ರೌಂಡ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಮಂಜು ಎಂಬುವವನು ನೀಡಿದ ಹೇಳಿಕೆ ಮೇಲೆ ಶಬಾಜ್ ಎಂಬಾತನನ್ನು ಬಂಧಿಸಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದ ಪೊಲೀಸರಿಗೆ ಹಲವು ಸತ್ಯಗಳು ಹೊರ ಬಂದಿದೆ.
ಈ ನಕಲಿ ನಂಬರ್ ಪ್ಲೇಟ್ ಅನ್ನು ಶಬಾಜ್ ಎನ್ನುವವನು ಮಂಜನಿಗೆ ಕೊಟ್ಟಿದ್ದಾನೆ. ಮಂಜ ಆ ಕಾರನ್ನು ಸೆಕೆಂಡ್ ಹ್ಯಾಂಡ್ ಶೋ ರೂಮಿಗೆ ನೀಡಿ ಮಾರಲು ಹೇಳಿದ್ದನಂತೆ. ಈ ವೇಳೆ ಎಲ್ಲರೂ ತಗಲಾಕಿಕೊಂಡಿದ್ದಾರೆ.

GIPHY App Key not set. Please check settings