ಉಡುಪಿ: ಸ್ವಲ್ಪ ವಯಸ್ಸಾದರೇ ಸಾಕು ಸಾಕಪ್ಪ ಸಾಕು, ಸುಸ್ತು ಅಂತ ಕೂರುವವರಿಗೆ ಎನರ್ಜಿ ಅಂದ್ರೆ ಇದು ಕಣ್ರೋ ಎನ್ನುವಂತೆ ಡ್ಯಾನ್ಸ್ ಮಾಡಿ ತೋರಿಸಿದ್ದಾರೆ ಅಜ್ಜಿ. ಅದು ಅಂತಿಂಥ ಜಾಗದಲ್ಲಿ ಅಲ್ಲ. ಕೆಸರು ಗದ್ದೆಯಲ್ಲಿ. ಅಜ್ಜಿಯ ಸಖತ್ ಡ್ಯಾನ್ಸ್ ಎಲ್ಲರ ಗಮನವನ್ನು ಸಖತ್ತಾಗಿಯೇ ಸೆಳೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಈ ಡ್ಯಾನ್ಸ್ ವಿಡಿಯೋ ವೈರಲ್ ಆಗ್ತಾ ಇದೆ.
ಗ್ರಾಮೀಣ ಭಾಗದ ಆಟಗಳನ್ನು ಆಗಾಗ ನೆನಪು ಮಾಡುವಂತ ಸ್ಪರ್ಧೆಗಳು ನಡೆಯುತ್ತಾ ಇರುತ್ತವೆ. ಈಗ ಉಡುಪಿ ಜಿಲ್ಲೆಯಲ್ಲೂ ಸಂಘ ಸಂಸ್ಥೆಗಳು ಇಂಥದ್ದೊಂದು ಕೆಲಸ ಮಾಡಿದ್ದಾರೆ. ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಆ ಗದ್ದೆಯೋಟದಲ್ಲಿ ಅಜ್ಜಿಯೇ ಗಮನ ಸೆಳೆದಿದ್ದಾರೆ.
ಕೃಷಿ ಮತ್ತು ಮಣ್ಣಿನ ಮಹತ್ವವನ್ನು ತಿಳಿಸುವುದಕ್ಕೆ ಅಂತ ಆಯೋಜಿಸುವ ಆಟವೇ ಕೆಸರು ಗದ್ದೆಯಾಟ. ಈ ಕೆಸರು ಗದ್ದೆಯಾಟದಲ್ಲಿ ಅಜ್ಜಿಯೊಬ್ಬರು ಉಲ್ಲಾಸದಿಂದ ಆಟವಾಡಿದ್ದಾರೆ. ಅಷ್ಟರೆ ಅಲ್ಲ ಗದ್ದೆಯಲ್ಲಿಯೇ ಅಜ್ಜಿ ಹುಲಿ ಕುಣಿತ ಮಾಡಿದ್ದಾರೆ. ಉಳಿದವರು ಕಂಡಂತೆ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಯುವತಿಯರು ನಾಚಿಕೆ ಪಡುವಂತೆ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಅಜ್ಜಿಯ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















