ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿನ ಸಮಸ್ಯೆ ಹೊತ್ತು ಕಡೂರು ಮಾಜಿ ಶಾಸಕ ಆರೋಗ್ಯ ಸಚಿವರನ್ನ ಹುಡುಕಿಕೊಂಡು ಬಂದಿದ್ದರು. ಆದ್ರೆ ಎಷ್ಟೇ ಕಾಯ್ದರು ಅವರಿಗೆ ಸಚಿವರು ಸಿಗಲೇ ಇಲ್ಲ. ಬಂದ ದಾರಿಗೆ ಸುಂಕವಿಲ್ಲದೆ, ದತ್ತಾ ಅವರು ಕೈ ಮುಗಿದು ವಾಪಾಸ್ ಆಗಿರುವ ಸನ್ನಿವೇಶ ಕಂಡಿತ್ತು.
ಹೌದು ಕಡೂರು ಮಾಜಿ ಶಾಸಕ ವೈ ಎಸ್ ವಿ ದತ್ತಾ ಅವರು ಇಂದು ಬೆಳಗ್ಗೆಯೇ ಬೆಂಗಳೂರಿಗೆ ಬಂದಿದ್ದರು. ಆರೋಗ್ಯ ಸಚಿವ ಸುಧಾಕರ್ ಅವರನ್ನ ಭೇಟಿಯಾಗಲು ಸದಾಶಿವ ನಗರದಲ್ಲಿರುವ ಅವರ ಮನೆಗೆ ತೆರಳಿದ್ದರು. ಆದ್ರೆ ಎಷ್ಟು ಹೊತ್ತು ಕಾಯ್ದರು ಆರೋಗ್ಯ ಸಚಿವರ ದರ್ಶನ ಭಾಗ್ಯ ಸಿಕ್ಕಿಲ್ಲ.
ಕಡೆಗೆ ಭೇಟಿ ಅಸಾಧ್ಯವೆನಿಸಿತ್ತೋ ಏನೋ ಮಾಜಿ ಶಾಸಕ ದತ್ತಾ ಅವರು ನಿವಾಸದಿಂದ ಹೊರ ಹೊರಟರು. ಅದಕ್ಕೂ ಮುನ್ನ ಮಾತನಾಡಿದ ವೈ ಎಸ್ ವು ದತ್ತಾ ಅವರು, ಸಚಿವರ ಬಳಿ ಮಾತನಾಡಿಬೇಕಿತ್ತು. ಆದ್ರೆ ಅವರು ಕೆಳಗಡೆ ಬರಲೇ ಇಲ್ಲ. ಹೀಗಾಗಿ ವಾಪಾಸ್ ಹೋಗುತ್ತಿದ್ದೇನೆ ಎಂದಿದ್ದಾರೆ. ಇನ್ನು ಹೊರಡುವ ಮುನ್ನ ಕೈ ಮುಗಿದು ಹೊರಟಿದ್ದಾರೆ ಎನ್ನಲಾಗಿದೆ.