ಬೆಂಗಳೂರು: ಬಿಗ್ ಬಾಸ್ ಮುಗಿದ ಮೇಲೆ ಶೂಟಿಂಗ್ ಅಂತ ಬ್ಯುಸಿಯಾಗಿರುವ ಸಾನ್ಯಾ ಅಯ್ಯರ್, ಇತ್ತಿಚೆಗೆ ಪುತ್ತೂರಿಗೆ ಭೇಟಿ ನೀಡಿದ್ದರು. ಅದು ಕಂಬಳಕ್ಕೆ ಸಾನ್ಯಾ ಅವರನ್ನು ಅತಿಥಿಯಾಗಿ ಕರೆಯಲಾಗಿತ್ತು. ಅಲ್ಲಿ ಸಾನ್ಯಾ ಅಯ್ಯರ್ ಜೊತೆಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ, ಸಾನ್ಯಾ ಅವನಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂಬ ಸುದ್ದಿಯೆಲ್ಲಾ ಹರಡಿತ್ತು. ಇದೀಗ ಆ ವಿಚಾರಕ್ಕೆ ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ಸ್ಪಷ್ಟನೆ ನೀಡಿದ್ದಾರೆ.
ನಾನು ಕಂಬಳಕ್ಕೆ ಸ್ನೇಹಿತೆಯರ ಜೊತೆಗೆ ಹೋಗಿದ್ದೆ. ಆಗ ಅಲ್ಲಿ ಯಾರೋ ನಶೆಯಲ್ಲಿದ್ದ ಹುಡುಗ ನನ್ನ ಸ್ನೇಹಿತೆಯರ ಮೇಲೆ ಬಿದ್ದ. ನಾವೂ ಜೋರಾಗಿ ಕಿರುಚಿದೆವು. ಅಲ್ಲಿದ್ದವರೆಲ್ಲಾ ಓಡಿ ಬಂದರು. ಆದರೆ ಬಿದ್ದ ಹುಡುಗ ಯಾರು..? ಎಲ್ಲಿ ಹೋದ..? ಏನು ಗೊತ್ತಿಲ್ಲ. ಈಗ ಸುದ್ದಿಯಾಗಿರುವಂತೆ ಅವನು ನನಗೆ ಕಪಾಳಕ್ಕೆ ಹೊಡೆದ, ನಾನು ಅವನ ಕಪಾಳಕ್ಕೆ ಹೊಡೆದ ಎಂಬ ಯಾವ ಸನ್ನಿವೇಶವೂ ನಡೆದಿಲ್ಲ ಎಂದಿದ್ದಾರೆ.
ಇನ್ನು ಮದ್ಯಪಾನ ಮಾಡಿ ಹೋಗಿದ್ದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿ, ನಾನು ಬಾಂಬೆಯಲ್ಲಜ ನಡೆಯುವ ಶೂಟಿಂಗ್ ಒಂದರಲ್ಲಿ ಭಾಗಿಯಾಗಬೇಕು. ಅದಕ್ಕೆ ಜೀರೋ ಶುಗರ್ ಡಯೆಟ್ ಮಾಡುತ್ತಾ ಇದ್ದೀನಿ. ನಾನು ಯಾವುದೇ ಕಾರಣಕ್ಕೂ ಮದ್ಯ ಸೇವನೆ ಮಾಡಿಲ್ಲ. ಧೂಮಪಾನ, ಮದ್ಯಪಾನ ಏನನ್ನು ನಾನು ಮಾಡುವುದಿಲ್ಲ. ನಾನು ಮಾಲೆ ಧರಿಸಿದ್ದೇನೆ. ಅದೆಲ್ಲ ಮಾಡಲು ಸಾಧ್ಯವಾ..? ಇನ್ನು ಅಲ್ಲಿ ಇದ್ದದ್ದೆಲ್ಲ ದೇವಸ್ಥಾನಗಳು. ಮದ್ಯಪಾನ ಮಾಡಿ ಅಲ್ಲಿಗೆ ಹೋಗುತ್ತೇವಾ..? ಕಂಬಳ ನೋಡುವುದಕ್ಕೆ ಹೋಗಿದ್ದು ಎಂಜಾಯ್ ಮಾಡುವುದಕ್ಕೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…