ಚಿಕ್ಕಬಳ್ಳಾಪುರ: ಡಿಸಿಸಿ ಬ್ಯಾಂಕ್ ಮೂಲಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆಂದು ಸಚಿವ ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಜರಬಂಡಳ್ಳಿ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಸಚಿವ ಸುಧಾಕರ್ ಭಾಗಿಯಾಗಿದ್ರು. ಈ ವೇಳೆ ಡಿಸಿಸಿ ಬ್ಯಾಂಕ್ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದೇಗೌಡ ಕೇವಲ ನಟನಾಗಿದ್ದಾರೆ. ಆದ್ರೆ ರಮೇಶ್ ಕುಮಾರ್ ರಿಂಗ್ ಮಾಸ್ಟರ್ ಆಗಿದ್ದಾರೆ.
ಡಿಸಿಸಿ ಬ್ಯಾಂಕ್ ವಿಚಾರಕ್ಕೆ ಡೈರೆಕ್ಟರ್, ಪ್ರೊಡ್ಯೂಸರ್ ಆಗಿದ್ದಾರೆ. ಡಿಸಿಸಿ ಬ್ಯಾಂಕ್ ಮೂಲಕ ರಮೇಶ್ ಕುಮಾರ್ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅದೆಲ್ಲ ನಡೆಯಲ್ಲ. ನಾನು ಡಿಸಿಸಿ ಬ್ಯಾಂಕ್ ನ ಅವ್ಯವಹಾರಗಳ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು ಎಂದು ಅಗ್ರಹಿಸಿದ್ದೇನೆ. ಆದರೆ ನ್ಯಾಯಾಲಯಕ್ಕೆ ಹೋಗಿ ತನಿಖೆ ಬೇಡ ಅಂತ ತಡೆಯಾಜ್ಞೆ ತಂದಿದ್ದಾರೆ. ಸತ್ಯ ಹರಿಶ್ಚಂದ್ರ ಆಗಿದ್ರೆ ಯಾಕೆ ತಡೆಯಾಜ್ಞೆ ತಂದ್ರು? ಇದರಲ್ಲಿ ಗೊತ್ತಾಗುದಿಲ್ವೇ ಕಳ್ಳ ಯಾರು ಅಂತ? ನೀವು ಸಾಚಾ ಆಗಿದ್ರೆ ನ್ಯಾಯಾಲಯಕ್ಕೆ ಯಾಕೆ ನಾನು ಡಿಸಿಸಿ ಬ್ಯಾಂಕ್ ನ ಅವ್ಯವಹಾರಗಳ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು ಎಂದು ಅಗ್ರಹಿಸಿದ್ದೇನೆ. ಆದರೆ ನ್ಯಾಯಾಲಯಕ್ಕೆ ಹೋಗಿ ತನಿಖೆ ಬೇಡ ಅಂತ ತಡೆಯಾಜ್ಞೆ ತಂದಿದ್ದಾರೆ. ಸತ್ಯ ಹರಿಶ್ಚಂದ್ರ ಆಗಿದ್ರೆ ಯಾಕೆ ತಡೆಯಾಜ್ಞೆ ತಂದ್ರು? ಇದರಲ್ಲಿ ಗೊತ್ತಾಗುದಿಲ್ವೇ ಕಳ್ಳ ಯಾರು ಅಂತ? ನೀವು ಸಾಚಾ ಆಗಿದ್ರೆ ನ್ಯಾಯಾಲಯಕ್ಕೆ ಯಾಕೆ ಹೋಗ್ತಿದ್ರೀ ಎಂದು ಪ್ರಶ್ನಿಸಿದ್ದಾರೆ.