ಶಿವಮೊಗ್ಗ: ವಿಧಾನಸಭೆ ಚುನಾವಣೆಗೆ ಇನ್ನು ಕೆಲವು ತಿಂಗಳುಗಳು ಇರುವಾಗಲೇ ಟಿಕೆಟ್ ಅಕಾಂಕ್ಷಿಗಳ ಪಟ್ಟಿ ಜೋರಾಗಿದೆ. ಅದರಲ್ಲೂ ಶಿವಮೊಗ್ಗದಲ್ಲಿ ಇದೀಗ ಕಾಂಗ್ರೆಸ್ ಟಿಕೆಟ್ ಯಾರಿಗೆ ಕೊಡಬಹುದು ಎಂಬ ಚರ್ಚೆ ಶುರುವಾಗಿದೆ. ಅದಕ್ಕೆಲ್ಲಾ ಕಾರಣ ಕಾಗೋಡು ತಿಮ್ಮಪ್ಪ ಅವರ ಪುತ್ರಿ ನೀಡಿದ ಹೇಳಿಕೆ.
ಶಿವಮೊಗ್ಗದಲ್ಲಿ ಕಾಗೋಡು ತಿಮ್ಮಪ್ಪ ಪುತ್ರಿ ಹೇಳಿಕೆ ಸುನಾಮಿ ಎಬ್ಬಿಸಿದೆ. ಡಾ ರಾಜನಂದಿನಿ 2023ರ ಚುನಾವಣೆ ಬಗ್ಗೆ ಮಾತನಾಡಿದ್ದಾರೆ. ಮುಂದಿನ ಚುನಾವಣೆಗೆ ನಮ್ಮತಂದೆಯೇ ಕಾಂಗ್ರೆಸ್ ನ ಅಭ್ಯರ್ಥಿ ಎಂದಿದ್ದಾರೆ. ನಮ್ಮ ತಂದೆಗೆ ಆ ಹುರುಪಿದೆ ಎಂದು ಸಾಗರ ಪಟ್ಟಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. ರಾಜನಂದಿನಿ ಅವರ ಮಾತಿನಿಂದ ಶಿವಮೊಗ್ಗದ ಕಾಂಗ್ರೆಸ್ ನಲ್ಲಿ ಚರ್ಚೆ ಶುರುವಾಗಿದೆ.
ಈ ಮಾತಿನ ನಂತರ ಬೇಳೂರು ಗೋಪಾಲಕೃಷ್ಣ ಅವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಎದ್ದಿದೆ. ಗೋಪಾಲ ಕೃಷ್ಣ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗುವುದಿಲ್ಲವಾ ಎಂಬ ಪ್ರಶ್ನೆ ಎದ್ದಿದೆ. ಇದು ರಾಜನಂದಿನಿ ಹೇಳಿಕೆಯ ಬಳಿಕ ಎದ್ದಿರುವ ಚರ್ಚೆಯಾಗಿದೆ.
ಆರು ಬಾರಿ ಶಾಸಕರಾಗಿ, ಸಚಿವರಾಗಿ ಅಧಿಕಾರ ಅನುಭವಿಸಿದ್ದಾರೆ. ಆದರೆ ಈಗ ಅವರ ವಯಸ್ಸು 90 ವರ್ಷ. ಈಗಲೂ ಅವರು ಉತ್ಸಾಹವಿದೆ ನಮ್ಮತಂದೆಗೆ ಟಿಕೆಟ್ ಬೇಕು ಎಂದಿದ್ದಾರೆ. ಗೋಪಾಲಕೃಷ್ಣ ಅವರು ಟಿಕೆಟ್ ಸಿಗದೆ ಇರುವ ಕಾರಣ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಬಂದಿದ್ದಾರೆ. ಈ ಬಾರಿ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆಯೂ ಇದೆ. ಆದ್ರೆ ಈ ಬೆನ್ನಲ್ಲೇ ಕಾಗೋಡು ಅವರ ಮಗಳ ಹೇಳಿಕೆ ಚರ್ಚೆಯಾಗಿದೆ.