Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯಾರು ಸಹನಾಶೀಲರಾಗುತ್ತಾರೋ ಅವರು ಜೀವನದಲ್ಲಿ ವಿಜಯಶಾಲಿಯಾಗುತ್ತಾರೆ : ಬಸವಪ್ರಭು ಸ್ವಾಮೀಜಿ

Facebook
Twitter
Telegram
WhatsApp

ಚಿತ್ರದುರ್ಗ, (ನ.05) : ಮಾನವನಿಗೆ ಎರಡು ಕಣ್ಣುಗಳಿದ್ದರೂ ದೃಷ್ಟಿ ಮಾತ್ರ ಒಂದೇ ರೀತಿಯಾಗಿ ಕಾಣುವಂತೆ, ಸಂಸಾರದಲ್ಲಿ ಸತಿ-ಪತಿ ಇಬ್ಬರಾದರೂ ಮನಸ್ಸು ಮಾತ್ರ ಒಂದೇ ಆಗಿರಬೇಕು. ಆಗ ಜೀವನ ಸುಂದರವಾಗುತ್ತದೆ, ಬಂಗಾರವಾಗುತ್ತದೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿಯವರು ಹೇಳಿದರು.

ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ)  ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಮೂವತ್ತೆರಡನೆ ವರ್ಷದ ಹನ್ನೊಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಮಾನವನಿಗೆ ಎರಡು ಕಿವಿಗಳಿವೆ ಶಬ್ದವು ಮಾತ್ರ ಒಂದೇ ರೀತಿಯಾಗಿ ಕೇಳುತ್ತದೆ. ಕಾಲುಗಳು ಎರಡಿದ್ದರೂ ಅವು ಒಂದೇ ದಿಕ್ಕಿನಲ್ಲಿ ಸಾಗುತ್ತವೆ. ಹಾಗೆಯೇ ದಾಂಪತ್ಯ ಜೀವನದಲ್ಲಿ ಸತಿಪತಿಗಳು ಎರಡು ದೇಹಗಳಾದರೂ ಆಲೋಚನೆಗಳು ಒಂದಾಗಿರಲಿ. ಆಗ ಜೀವನ ಸ್ವರ್ಗಕ್ಕೆ ಸಮಾನವಾಗುತ್ತದೆ. ಸತಿಪತಿಗಳ ಆಲೋಚನೆಗಳು ಒಂದಾಗದಿದ್ದರೆ ಬದುಕು ನರಕವಾಗುತ್ತದೆ. ಸ್ವರ್ಗ ನರಕಗಳು ಎಲ್ಲಿಯೂ ಇಲ್ಲ. ಅವು ಮಾನವನ ಹೃದಯ ಮತ್ತು ನಾಲಿಗೆಯಲ್ಲಿವೆ  ಹೃದಯದಲ್ಲಿ ದ್ವೇಷವನ್ನು ತುಂಬಿಕೊಂಡರೆ ಬದುಕು ನರಕವಾಗುತ್ತದೆ ಅದರ ಬದಲಾಗಿ ಪ್ರೇಮವನ್ನು ತುಂಬಿಕೊಂಡರೆ ಸ್ವರ್ಗವಾಗುತ್ತದೆ. ಅಂತರಂಗದಲ್ಲಿ ಸದ್ಬಾವನೆ ಇದ್ದಾಗ ಮಾತು, ಕೃತಿಗಳು ಸಾತ್ವಿಕವಾಗಿ ದಾರ್ಶನಿಕನಾಗುತ್ತಾನೆ. ದುರ್ಭಾವನೆ ಬಂದರೆ ಮಾನವ ರಕ್ಕಸನಾಗುತ್ತಾನೆ. ಜೀವನದಲ್ಲಿ ದಂಪತಿಗಳು ಬಂದ ಕಷ್ಟಗಳನ್ನು ತಡೆದುಕೊಳ್ಳಬೇಕು. ಯಾರು ಸಹನಾಶೀಲರಾಗುತ್ತಾರೋ ಅವರು ಜೀವನದಲ್ಲಿ ವಿಜಯಶಾಲಿಯಾಗುತ್ತಾರೆ ಎಂದು ಹಿತವಚನ ನುಡಿದರು.

ನಾಡಿನಲ್ಲಿ ಶತಶತಮಾನಗಳಿಂದ ಸಮಾಜಮುಖಿ ಕಾರ್ಯಗಳನ್ನು  ನಿರಂತರವಾಗಿ ನಡೆಸಿಕೊಂಡ ಬಂದ ಕೀರ್ತಿ ಚಿತ್ರದುರ್ಗ ಮುರುಘಾಮಠಕ್ಕೆ ಸಲ್ಲುತ್ತದೆ. ಮುರುಘಾಮಠದ ಪರಂಪರೆಯ ಎಲ್ಲಾ ಪೀಠಾಧೀಶರ ಕೊಡುಗೆ ಅನನ್ಯವಾಗಿದೆ. 1863ರಲ್ಲಿ ದೇಶದಲ್ಲಿಯೇ ಪ್ರಪ್ರಥಮವಾಗಿ ಉಚಿತ ಪ್ರಸಾದ ನಿಲಯಗಳನ್ನು ಪ್ರಾರಂಭಿಸಿದ ಕೀರ್ತಿ ಮುರುಘಾಮಠದ ಶಿರಸಂಗಿ ಮಹಾಲಿಂಗ ಸ್ವಾಮೀಜಿಯವರಿಗೆ ಸಲ್ಲುತ್ತದೆ. ನಂತರ ಶ್ರೀ ಜಯದೇವ, ಶ್ರೀ ಜಯವಿಭವ, ಶ್ರೀ ಮಲ್ಲಿಕಾರ್ಜುನ ಜಗದ್ಗುರುಗಳು ಅನ್ನದಾಸೋಹ , ಜ್ಞಾನ ದಾಸೋಹ , ಅಕ್ಷರ ದಾಸೋಹವನ್ನು  ಪ್ರಾರಂಭಿಸಿ ತ್ರಿವಿಧ ದಾಸೋಹಮಠವೆಂದು ಪ್ರಖ್ಯಾತಿಯನ್ನು ಪಡೆಯಲು ಕಾರಣರಾಗಿಗಿರೆ. ಡಾ. ಶಿವಮೂರ್ತಿ ಮುರುಘಾ ಶರಣರು ಕಳೆದ 32 ವರ್ಷಗಳಿಂದ ಸಾಮೂಹಿಕ ಕಲ್ಯಾಣ ಮಹೋತ್ಸವ ಪ್ರಾರಂಭಿಸಿ ಬಡವರ ಬಂಧುವಾಗಿ ದುಡಿಯುತ್ತಿದ್ದಾರೆ. ಅವರ ಸಮಾಜಸೇವೆಗಳು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಸಮ್ಮುಖ ವಹಿಸಿದ್ದ ಹಾವೇರಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮಿಗಳು ಮಾತನಾಡಿ, ಮುರುಘಾಮಠದಲ್ಲಿ ಜಾತ್ಯತೀತವಾಗಿ ಕಲ್ಯಾಣ ಕಾರ್ಯಗಳು ನಡೆದುಕೊಂಡು ಬಂದಿರುವುದು ವಿಶೇಷ. ವ್ಯಕ್ತಿ ವಿಕಲಚೇತನನಾದರೆ, ಕಣ್ಣು ಕಾಣಿಸದಾದರೆ, ಕನ್ನಡಕ, ಕೃತಕ ಕಣ್ಣು, ಕಾಲುಗಳನ್ನು ಆಶ್ರಯಿಸುತ್ತಾನೆ. ಕಣ್ಣು ಕಾಣಿಸದಾದಾಗ ಕನ್ನಡಕ ಬಳಸುವಂತೆ, ಹಾಗೂ ಹೂ ಮತ್ತು ದಾರ ಒಂದಾಗಿ ಹಾರವಾಗುವಂತೆ ಪತಿ ಮತ್ತು ಸತಿ ಜೀವನದಲ್ಲಿ ಒಬ್ಬರಿಗೊಬ್ಬರು ಅರಿತು ಅನ್ಯೋನ್ಯವಾಗಿ ಜೀವನ ಸಾಗಿಸಬೇಕೆಂದರು.

ಇದೇ ಸಂದರ್ಭದಲ್ಲಿ 5 ಜೋಡಿಗಳ ವಿವಾಹ ನೆರವೇರಿತು. ಚೆನ್ನಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅವರ ಜಯಂತಿಯನ್ನು ಆಚರಿಸಲಾಯಿತು.
ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮಿಗಳು, ಪೈಲ್ವಾನ್ ತಿಪ್ಪೇಸ್ವಾಮಿ ಇದ್ದರು.

ಪ್ರಕಾಶ್‍ದೇವರು ಸ್ವಾಗತಿಸಿದರು. ಎನ್.ಜಿ. ಶಿವಕುಮಾರ್ ನಿರೂಪಿಸಿದರು. ಟಿ.ಪಿ. ಜ್ಞಾನಮೂರ್ತಿ ವಂದಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ : ವಕೀಲರಿಗೆ ಸನ್ಮಾನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಬಾಪೂಜಿ ಸಮೂಹ ಸಂಸ್ಥೆಗಳು, ರಂಗಸೌರಭ ಕಲಾ ಸಂಘ ಹಾಗೂ ಶ್ರೀ ಶಿವಕುಮಾರ ಕಲಾ ಸಂಘ ಇವರ ಸಂಯುಕ್ತ

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೋಲಿಗೆ ಆ ಐವರು ಕಾರಣವೇ ?

ಸುದ್ದಿಒನ್ | ಮಹಾರಾಷ್ಟ್ರ ಚುನಾವಣೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಕೇವಲ 16 ಸ್ಥಾನಗಳನ್ನು ಗೆದ್ದಿದೆ. ಭಾರೀ ಸೋಲಿನ ನಂತರ ಪಕ್ಷವು ಇವಿಎಂಗಳಿಂದ ನಮಗೆ ಸೋಲಾಗಿದೆ ಎಂದು ದೂರಿದೆ. ಇವಿಎಂಗಳ ದತ್ತಾಂಶದಿಂದಾಗಿ ಚುನಾವಣೆ

RCB ಸೇರ್ತಾರೆ ಅಂದುಕೊಂಡ್ರೆ ಕನ್ನಡಿಗ ರಾಹುಲ್ ಡೆಲ್ಲಿ ಪಾಲು..!

RCB ಕ್ರೇಜ್ ಎಷ್ಟಿದೆ‌ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಐಪಿಎಲ್ ಶುರುವಾಗುವ ಮುನ್ನವೇ ಆರ್ಸಿಬಿ ಫೀವರ್ ಅಭಿಮಾನಿಗಳಲ್ಲಿ ಜೋರಾಗಿ ಬಿಡುತ್ತದೆ. ಆರ್ಸಿಬಿ ಅಂದ್ರೆ ಅಷ್ಟು ಪ್ರೀತಿ ಕನ್ನಡಿಗರಿಗೆ. ಈಗ ಆರ್ಸಿಬಿ ಫ್ಯಾನ್ಸ್ ಖುಷಿ ಪಡೋ

error: Content is protected !!