ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 30 : ಬಸ್ ನಲ್ಲಿ ಪ್ರಯಾಣಿಸುವಾಗ, ಒಬ್ಬೊಬ್ಬರೆ ಓಡಾಡುವಾಗ ಚಿನ್ನಾಭರಣಗಳ ಬಗ್ಗೆ ಎಚ್ಚರವಿರಲಿ ಎಂದು ಪೊಲೀಸರು ಕೂಡ ಎಚ್ಚರಿಸುತ್ತಲೇ ಇರುತ್ತಾರೆ. ಅದರಲ್ಲೂ ಬಸ್ ನಲ್ಲಿ ಓಡಾಡುವವರು ಚಿನ್ನಾಭರಣಗಳ ಮೇಲೆ ಗಮನ ಹರಿಸಬೇಕು. ಇವತ್ತು ಬಸ್ ಹತ್ತುವ ವೇಳೆ, ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಭರಣವನ್ನೇ ಕಳ್ಳ ಕದ್ದಿದ್ದಾನೆ. ಚಳ್ಳಕೆರೆ ಕೆಎಸ್ಆರ್ಟಿಸಿ ಬಸ್ ಹತ್ತುವ ವೇಳೆ ಈ ಘಟನೆ ನಡೆದಿದೆ.
ರಾಯದುರ್ಗದ 49 ವರ್ಷದ ಟಿ.ಚೂಡಾಮಣಿ ಎಂಬ ಮಹಿಳೆಯ ಒಡವೆ ಕಳ್ಳತನವಾಗಿರುವುದು. ಚೂಡಾಮಣಿ ಅವರು ಚಳ್ಳಕೆರೆಯಿಂದ ರಾಯದುರ್ಗಕ್ಕೆ ಪ್ರಯಾಣಿಸಲು ಮಧ್ಯಾಹ್ನ 2.30 ಕ್ಕೆ ಬಸ್ ನಿಲ್ದಾಣಕ್ಕೆ ಬಂದಿದ್ದರು. ಮಹಿಳೆ ಬಂದ ಕೆಲವೇ ಹೊತ್ತಲ್ಲಿ ಬಸ್ ಆಗಮಿಸಿದೆ. ಜನಜಂಗುಳಿಯ ಬೇರೆ ಇತ್ತು. ಆದರೂ ಅದರ ಮಧ್ಯದಲ್ಲೇ ಮಹಿಳೆ ಬಸ್ ಹತ್ತಿದ್ದಾರೆ. ಜನಜಂಗುಳಿ ಇದ್ದ ಕಾರಣ ಬ್ಯಾಗ್ ನ ಜಿಪ್ ಓಪನ್ ಆಗಿರುವುದು ಗಮನಕ್ಕೆ ಬಂದಿಲ್ಲ. ಬಸ್ ಹತ್ತಿದ ಮೇಲೆ ಬ್ಯಾಗ್ ನೋಡಿಕೊಂಡಿದ್ದಾರೆ. ಜೀಪ್ ಓಪನ್ ಆಗಿದ್ದನ್ನು ಕಂಡು ಗಾಬರಿಯಾಗಿದ್ಧಾರೆ. ಕೂಡಲೇ ಕೂಗಿಕೊಂಡಾಗ ಸಾರ್ವಜನಿಕರು ಆಕೆಯ ನೆರವಿಗೆ ದಾವಿಸಿದ್ಧಾರೆ.
ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಗಿದೆ. ದೂರಿನಲ್ಲಿ ಮಹಿಳೆ ತನ್ನ ವ್ಯಾನಿಟಿಬ್ಯಾಗ್ ನಲ್ಲಿ ಏನೆಲ್ಲ ವಸ್ತುಗಳು ಇದ್ದವು ಎಂಬುದನ್ನು ತಿಳಿಸಿದ್ದಾರೆ. ಮಹಿಳೆ ಹೇಳಿದ ಪ್ರಕಾರ, ವ್ಯಾನಿಟಿಬ್ಯಾಗ್‌ನಲ್ಲಿ 90 ಸಾವಿರ ಮೌಲ್ಯದ ಬಂಗಾರದ ಬಳೆ, 60 ಸಾವಿರ ಹರಳಿನ ಬಳೆ, 25 ಸಾವಿರ ಮೌಲ್ಯದ ಉಂಗುರ, 15 ಸಾವಿರ ಮೌಲ್ಯದ ಕಿವಿ ಓಲೆ, 5 ಸಾವಿರ ಮೌಲ್ಯದ ರಿಂಗ್, 15 ಸಾವಿರ ಮೌಲ್ಯದ ಬಂಗಾರದ ಜುಮುಕಿ, 20 ಸಾವಿರ ಮೌಲ್ಯ ಗುಂಡಿನ ಸರ, 40 ಸಾವಿರ ಬ್ರಾಸ್‌ಲೇಟ್ ಸೇರಿದಂತೆ ಒಟ್ಟು 27 ಲಕ್ಷದ 87 ಗ್ರಾಂ ಬಂಗಾರದ ಆಭರಣ ಕಳ್ಳತನವಾಗಿದೆ. ಠಾಣಾಧಿಕಾರಿ ಶ್ರೀನಿವಾಸ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಫೆ. 23…
ಸುದ್ದಿಒನ್ ವಿರಾಟ್ ಕೊಹ್ಲಿ 14,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್…
ದಾವಣಗೆರೆ; ರಾಜ್ಯದಲ್ಲಿ ಇನ್ನೇನು ತಾಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ರೇಣುಕಾಚಾರ್ಯ ಅವರು…
ತುಮಕೂರು: ಬೆಸ್ಕಾಂ ತುಮಕೂರು ನಗರ ಉಪ ವಿಭಾಗ 1ರ ವ್ಯಾಪ್ತಿಯಲ್ಲಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಪ್ರತ್ಯೇಕ ಕೃಷಿ…
ಸುದ್ದಿಒನ್ ಪ್ರತಿಯೊಬ್ಬ ಭಾರತೀಯ ಅಭಿಮಾನಿಯೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್‌ಗಳನ್ನು ನಿರೀಕ್ಷಿಸುತ್ತಾರೆ.…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 23 : ಮಕ್ಕಳ ಅರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವಹಿಸಿ ಜಂಕ್ ಪುಡ್ ಕಡೆಗೆ ಅವರ…